×
Ad

ಕಲಬುರಗಿ | ಫೆಲೆಸ್ತೀನಿಯರ ಮೇಲಿನ ನರಮೇಧ ಖಂಡಿಸಿ ಪ್ರತಿಭಟನಾ ಸಮಾವೇಶ

Update: 2025-08-23 22:39 IST

ಕಲಬುರಗಿ: ನಗರದ ಶಾಲಿಮಾರ್ ಪಂಕ್ಷನ್ ಹಾಲ್ ನಲ್ಲಿ ಜಿಲ್ಲಾ ಜಾಂಟ್ ಅಕ್ಷನ್ ಕಮಿಟಿ ವತಿಯಿಂದ ಶನಿವಾರ ಫೆಲೆಸ್ತೀನಿಯರ ಮೇಲಿನ ನರಮೇಧ ಖಂಡಿಸಿ ಪ್ರತಿಭಟನಾ ಸಮಾವೇಶ ಜರುಗಿತು.

ಕಾರ್ಯಕ್ರಮದಲ್ಲಿ ವಾಹದತ್ ಎ ಇಸ್ಲಾಮಿ ಅಧ್ಯಕ್ಷರಾದ ಅಬ್ದುಲ್ ರಹೀಮ್ ಮಾತನಾಡಿ, ಫೆಲೆಸ್ತೀನಿಯರ ಪರ ನಮ್ಮ ಹೋರಾಟ ದೌರ್ಜನ್ಯದ ವಿರುದ್ಧ ಹೋರಾಟವಾಗಿದೆ. ಅಮಾಯಕರ ನರಮೇಧ ಖಂಡಿಸುವುದು ಮಾನವೀಯತೆಯ ಮೌಲ್ಯವನ್ನು ರಕ್ಷಿಸುವ ಸಂಕೇತವಾಗಿದೆ. ಗಾಝಾ ದೇಶದ ನಾಗರಿಕರು ತನ್ನ ಬಲಿದಾನದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶದ ನೀಜ ಬಣ್ಣ ಬಯಲಾಗಿದೆ‌. ಫೆಲೆಸ್ತೀನ್‌ ನಾಗರಿಕರು ದೇಶ ಬಿಟ್ಟು ತನ್ನ ದೇಶದಲ್ಲಿ ಉಳಿದಿರುವುದು ದೇಶದ ನಿಜವಾದ ಪ್ರೇಮವನ್ನು ಕಲಿಸಿಕೊಡುತ್ತದೆ ಎಂದರು.

ಫೆಲೆಸ್ತೀನಿಯರ ನರಮೇಧ ಮಾನವೀಯತೆಯ ವಿರುದ್ಧದ ನರಮೇಧವಾಗಿದೆ. ಈ ನರಮೇಧ ನಿಲ್ಲುವವರೆಗೆ ನಮ್ಮ ಹೋರಾಟ ಹೀಗೆ ಮುಂದೆವರೆಯುತ್ತದೆ ಎಂದು ಎಸ್.ಡಿ.ಪಿ.ಐ ಮುಖಂಡ ಮುಹಮ್ಮದ್ ಮೊಹಸೀನ್ ಹೇಳಿದರು.

ಹಯಾತ್ ಉಲ್ಲಾ ಖಾದ್ರಿ ದರ್ಗಾದ ಸಜ್ಜಾದೆ ಹಿದಾಯತ್ ಉಲ್ಲಾ ಖಾದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಡಾ.ಮತೀನ್ ಉಲ್ ಖಾದ್ರಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಾಂಯಿಟ್ ಅಕ್ಷನ್ ಕಮಿಟಿಯ ಅಧ್ಯಕ್ಷ ಮುನ್ನಾ ಧಾರವಾಡ, ಉಪಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಗೋಲಾ, ಕಲಬುರಗಿ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಸದ್ ಅನ್ಸಾರಿ ವೇದಿಕೆಯಲ್ಲಿ ಇದ್ದರು.

ವೇಲ್ಫರ್ ಪಾರ್ಟಿಯ ಮುಹಮ್ಮದ್ ಮುಬೀನ್, ಮೌಲಾನಾ ವಿಖಾರ್ ಆಶ್ರಫಿ, ಹಿದಾಯತ್ ಸೆಂಟರ ಮುಖ್ಯಸ್ಥರಾದ ಜಾಕಿರ್ ಹುಸೈನ್, ಮೌಲಾನಾ ಜಾವಿದ್ ಆಲಮ್, ಅಫಜಲ್ ಮುಹಮ್ಮದ್, ಮುಹಮ್ಮದ್ ಶಾಹೀನ್, ಮೌಲಾನಾ ಶೇಕ್ ಸಲೀಮ್ ನಿಜಾಮಿ, ನಜರ್ ಮುತ್ವಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News