×
Ad

ಕಲಬುರಗಿ | ತಾತ್ಕಾಲಿಕ ಅನರ್ಹ ಅರ್ಜಿದಾರರ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

Update: 2025-06-20 21:44 IST

ಕಲಬುರಗಿ: ಕಲಬುರಗಿ ಮಹಾನಗರಪಾಲಿಕೆಯ 2012-13 ಮತ್ತು 2014-15 ನೇ ಸಾಲಿನ ಪಾಲಿಕೆನಿಧಿ ಪರಿಷ್ಕೃತ ಕ್ರಿಯಾ ಯೋಜನೆಯಲ್ಲಿ 2024-25ನೇ ಸಾಲಿಗಾಗಿ ಶೇ.24.10 ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯ ಭವನಗಳಿಗೆ ಆಟದ ಸಾಮಗ್ರಿ ವಿತರಿಸಲು ಈಗಾಗಲೇ ಅರ್ಜಿ ಆಹ್ವಾನಿಸಿ, ತಾತ್ಕಾಲಿಕ ಅನರ್ಹ ಅರ್ಜಿದಾರರ ಪಟ್ಟಿಯನ್ನು ಕಲಬುರಗಿ ಮಹಾನಗರ ಪಾಲಿಕೆಯ ನೋಟೀಸ್ ಬೋರ್ಡ್‍ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಆಡಳಿತ) ಅವರು ತಿಳಿಸಿದ್ದಾರೆ.

ಈ ತಾತ್ಕಾಲಿಕ ಅನರ್ಹ ಪಟ್ಟಿಗೆ ಅಕ್ಷೇಪಣೆಗಳು ಇದ್ದಲ್ಲಿ 2025ರ ಜೂ.28 ರೊಳಗಾಗಿ ಪೂರಕ ದಾಖಲೆಗಳೊಂದಿಗೆ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅಕ್ಷೇಪಣೆ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News