×
Ad

ಕಲಬುರಗಿ | ಸಾವಳಗಿಯಲ್ಲಿ ಶಾಸಕ ಅಲ್ಲಮ ಪ್ರಭು ಪಾಟೀಲ್‌ರಿಂದ ಜನಸ್ಪಂದನಾ ಕಾರ್ಯಕ್ರಮ

Update: 2024-12-01 15:48 IST

ಕಲಬುರಗಿ : ತಾಲೂಕಿನ ಸಾವಳಗಿಯಲ್ಲಿ ಶನಿವಾರ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ನೇತೃತ್ವದಲ್ಲಿ ನಡೆದ ಜನಸ್ಪಂದನಕ್ಕೆ ಅಭೂತಪೂರ್ವ ಜನಸ್ಪಂದನೆ ದೊರೆತಿದೆ.

ಸರಕಾರದ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಂದಿಗೆ ಸಾವಳಗಿ ಗ್ರಾಮದಲ್ಲಿ ಶಾಸಕರು ಮಧ್ಯಾಹ್ನದಿಂದ ಆರಂಭಿಸಿದ ಜನಸ್ಪಂದನ ಸಭೆ 3 ಗಂಟೆಗೂ ಹೆಚ್ಚುಕಾಲ ನಡೆಯಿತು.

ಸಭೆಯಲ್ಲಿ ಕಂದಾಯ ಇಲಾಖೆಗೆ ಸೇರಿರುವ 74, ಪಂಚಾಯತ್ ರಾಜ್ ಇಂಜಿನಿಯರಿಂಗ್ಗೆ ಸೇರಿದ 19, ಜೆಸ್ಕಾಂಗೆ ಸೇರಿದ 4, ಶಿಕ್ಷಣ ಹಾಗೂ ಆರೋಗ್ಯ ಇಸಲಾಖೆ ಸೇರಿರುವ ತಲಾ ಒಂದೊಂದು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೇರಿರುವ 4 ಅಹವಾಲುಗಳನ್ನು ಆಲಿಸಿದ ಶಾಸಕರು ಇವೆಲ್ಲದಕ್ಕೂ ಸೂಕ್ತ ಪರಿಹಾರ ಸೂಚಿಸಿದರು.

ಕೆಲವು ಅಹವಾಲುಗಳಲ್ಲಿ ತಾಂತ್ರಿಕ ಸಂಗತಿಗಳು ಇರುವುದರಿಂದ ಅಂತವುಗಳನ್ನು ಇಲಾಖೆಯ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ಕಾನೂನು ರೀತ್ಯಾ ಪರಿಹಾರ ನೀಡುವಂತೆಯೂ ಶಾಸಕರು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಸಭೆಯಲ್ಲಿ 500 ಕ್ಕೂ ಹೆಚ್ಚು ಹಳ್ಳಿ ಜನ ಪಾಲ್ಗೊಂಡು ತಮ್ಮ ಅಹವಾಲುಗಳನ್ನು ಶಾಸಕರ ಗಮನಕ್ಕೆ ತಂದರು. ಸ್ಥಳದಲ್ಲಿಯೇ ಹಲವು ಅಹವಾಲುಗಳಿಗೆ ತಕ್ಷಣ ಶಾಸಕರು ಪರಿಹಾರ ಸೂಚಿಸಿದರು.

ಸಾವಳಗಿ ಪಂಚಾಯತ್ ಅಧ್ಯಕ್ಷರಾದ ರಮೇಶ ಕನಗೊಂಡ, ಉಪಾಧ್ಯಕ್ಷರಾದ ಅರುಣಿಕಾ ಸೋಮಲಿಂಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ಪಿಡಬ್ಲೂಡಿ, ಪಿಆರ್‌ಇ, ಆರ್ಡಿಪಿಆರ್, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಪಂ ಮುಖ್ಯಾಧಿಕಾರಿಗಳು ಸಭೆಯಲ್ಲಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News