×
Ad

ಕಲಬುರಗಿ | ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಬಿ.ಹೊಸಮನಿಗೆ ಸನ್ಮಾನ

Update: 2025-10-30 23:25 IST

ಕಲಬುರಗಿ : 2025ನೇ‌ ಸಾಲಿನ ಶಿಕ್ಷಣ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಎಸ್.ಬಿ.ಹೊಸಮನಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಅವರು ಸನ್ಮಾನಿಸಿ, ಶುಭ ಕೋರಿದ್ದಾರೆ.

ನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಅವರು ಶಿಷ್ಠಾಚಾರದಂತೆ ಸನ್ಮಾನಿಸಿದರು. ಇದೇ ವೇಳೆಯಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ಎಸ್.ಬಿ.ಹೊಸಮನಿ ಕುಟುಂಬಸ್ಥರು ಇದ್ದರು.

ಅವರು ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಲಬುರಗಿ ಜಿಲ್ಲೆಯ ಏಕೈಕ ಸಾಧಕರೆನಿಸಿಕೊಂಡಿದ್ದಾರೆ. ಪ್ರಶಸ್ತಿ ಪುರಸ್ಕೃತ ಎಸ್.ಬಿ.ಹೊಸಮನಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಕೌಜಲಗಿ ಗ್ರಾಮದವರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News