×
Ad

ಕಲಬುರಗಿ | ರೆಹಮಾನ್ ಪಟೇಲ್‌ಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರದಾನ

Update: 2025-05-24 18:16 IST

ಕಲಬುರಗಿ : ಕಲಾವಿದ ರೆಹಮಾನ್ ಪಟೇಲ್ ಅವರಿಗೆ ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 52ನೇ ವಾರ್ಷಿಕ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನೀರು ಬಣ್ಣ ಬಳಸಿ ಕಾಗದದಲ್ಲಿ ರಚಿಸಲಾದ "ಮಧ್ಯಮದಿ ರಾಗ" ಎಂಬ ಸುರಪುರದ ಚಿಕಣಿ ಕಲಾ ಪ್ರಕಾರಕ್ಕಾಗಿ ಈ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು 25,000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಿದರು. ಖ್ಯಾತ ಬರಹಗಾರ ನಾಡೋಜ ಬರಗೂರು ರಾಮಚಂದ್ರಪ್ಪ ಮತ್ತು ಅಕಾಡೆಮಿ ಅಧ್ಯಕ್ಷ ಪಾ ಸ ಕುಮಾರ್, ರಿಜಿಸ್ಟ್ರಾರ್ ನೀಲಮ್ಮ ಬಿ. ಮತ್ತು ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News