ಕಲಬುರಗಿ | ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ
Update: 2025-06-02 19:45 IST
ಕಲಬುರಗಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಸೋಮವಾರ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಚಿಂಚೋಳಿ ಮತಕ್ಷೇತ್ರದ ಕೊಂಡಪಲ್ಲಿ ಗ್ರಾಮದ ನರಸಪ್ಪ (60) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎನ್ನಲಾಗಿದೆ. ಸಾರಿಗೆ ಬಸ್ ಮೂಲಕ ಸಟಪಟನಹಳ್ಳಿಯ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಸ್ಥಳೀಯರು ಅಗ್ನಿಶಾಮಕ ದಳದ ಮಾಹಿತಿಯಿಂದ ಸಹಾಯಕ ಠಾಣಾಧಿಕಾರಿ ಬಸಪ್ಪ ಅವರ ನೇತೃತ್ವದಲ್ಲಿ ಅಗ್ನಿ ಶಾಮಕ ತಂಡ ಕಾರ್ಯಚರಣಿ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆಯಲ್ಲಿ ಸೇಡಂ ಪೊಲೀಸ್ ಠಾಣೆಯ ಪಿಎಸ್ಐ ಉಪೇಂದ್ರಕುಮಾರ, ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಹಣಮಂತ, ರಿಯಾಝ್, ಯುವರಾಜ್ ಬಣಕಾರ ನರೇಂದ್ರ, ಬಸಪ್ಪ , ನಿಂಗರಾಜ, ವಸಂತ ಮತ್ತಿತರರು ಇದ್ದರು.