ಕಲಬುರಗಿ | ಕರ್ನಾಟಕ ಭೀಮ್ ಸೇನೆಯ ಜಿಲ್ಲಾಧ್ಯಕ್ಷರಾಗಿ ಸಂಜಯ ಭೋಸಲೆ ನೇಮಕ
Update: 2025-09-23 16:44 IST
ಕಲಬುರಗಿ: ಕರ್ನಾಟಕ ಭೀಮ್ ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷರನ್ನಾಗಿ ಸಂಜಯ ಭೋಸಲೆ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಆದೇಶ ಪ್ರಕಟಿಸಿದ ಕರ್ನಾಟಕ ಭೀಮ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ, ಪ್ರಾಮಾಣಿಕ ಮತ್ತು ದಲಿತಪರ ಕಾಳಜಿಯನ್ನು ಗೌರವಿಸಿ ಸಂಜಯ ಭೋಸಲೆ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ.
ನಾಡಭಿಮಾನ ಎತ್ತಿ ಹಿಡಿಯುವುದರೊಂದಿಗೆ ದಲಿತರ, ರೈತರ, ಕಾರ್ಮಿಕರ ಹಾಗೂ ವಿದ್ಯಾರ್ಥಿಪರ ಹೋರಾಟದ ಚಿಂತನೆಗಳನ್ನು ಬೆಳಸಿಕೊಂಡು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಪರ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.