×
Ad

ಕಲಬುರಗಿ | ಸೆ.28 ರಂದು ಸೌಭಾಗ್ಯಸಿರಿ ಕಾಯಕ ಪ್ರಶಸ್ತಿ ಕಾರ್ಯಕ್ರಮ : ಸುರೇಶ್ ಬಡಿಗೇರ್

Update: 2025-09-25 22:47 IST

ಕಲಬುರಗಿ: ಸೌಭಾಗ್ಯಸಿರಿ ಸ್ಮರಣಾರ್ಥ ಸೌಭಾಗ್ಯಸಿರಿ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಸೆ.28 ರಂದು ಸಂಜೆ 4.15ಕ್ಕೆ ನಗರದ ಕನ್ನಡ ಭವನದಲ್ಲಿ ಕಾಯಕ ರತ್ನ ಪ್ರಶಸ್ತಿ, ಸೌಭಾಗ್ಯಸಿರಿ ಗೌರವ, ಸಂಗೀತೋತ್ಸವ ಹಾಗೂ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸುರೇಶ ಬಡಿಗೇರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಜನ ಸಾಧಕರಿಗೆ ಸೌಭಾಗ್ಯಸಿರಿ ಕಾಯಕ ರತ್ನ ಪ್ರಶಸ್ತಿ ಮತ್ತು 10 ಜನರಿಗೆ ಸೌಭಾಗ್ಯಸಿರಿ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಡಾ.ಅಲ್ಲಮಪ್ರಭು ದೇಶಮುಖ ದಿವ್ಯ ನೇತೃತ್ವ ವಹಿಸಲಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧೀಕ್ಷಕ ಅಭಿಯಂತರ ಡಾ.ಸುರೇಶ ಎಚ್.ಶರ್ಮಾ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಹಾಗೂ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ್‌ ಚಿಂಚನಸೂರ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಹಾನಗರಪಾಲಿಕೆ ಮಹಾಪೌರರಾದ ವರ್ಷ ಜಾನೆ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶಿಲ್‌ ಜಿ.ನಮೋಶಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಪಾಲಿಕೆ ಉಪಮಹಾಪೌರ ತೃಪ್ತಿ ಲಾಖೆ, ಮಾಜಿ ಸದಸ್ಯ ರಾಜುಕುಮಾರ ಎಚ್. ಕವನೂರ, ಶ್ರೀಗುರು ಸ್ವತಂತ್ರ ವಪೂ ಮಹಾ ವಿದ್ಯಾಲಯ ಮುಖ್ಯಸ್ಥ ನಿತಿನ್ ವಿ. ನಾಯಕ್, ಜಿಲ್ಲಾ ಕನ್ನಡ ಸಾಹಿತ ಪರಿಣಿತ್ತಿನ ಅಧ್ಯಕ್ಷ ವಿಜಯಕುಮಾರ ಸಿ. ಪಾಟೀಲ ತೇಗಲತಿಪ್ಪಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕ.ರಾನೌ.ಸಂಘ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಸಾಹಿತಿ-ಪತ್ರಕರ್ತ ಡಾ. ಶಿವರಂಜನ ಸಂಪಟೇ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪವನಕುಮಾರ ವಳಕೇರಿ, ಎಸ್.ಎಲ್.ಪಾಟೀಲ್, ಲೋಹಿತ ವಿಶ್ವಕರ್ಮ, ಲಿಂಗರಾಜ ಡಾಂಗೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News