×
Ad

ಕಲಬುರಗಿ | ಸೆ. 26ರಂದು ಕಸಾಪದಿಂದ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

Update: 2025-09-22 23:23 IST

ಕಲಬುರಗಿ: ಸುಭದ್ರ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ 24 ಶಿಕ್ಷಕರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ. 26ರಂದು ಬೆಳಗ್ಗೆ 11.15ಕ್ಕೆ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಶಿಕ್ಷಕರ ಪಾತ್ರ ದೇಶ ನಿರ್ಮಾಣದ ಬುನಾದಿ ಕಟ್ಟುವ ಕೆಲಸದಲ್ಲಿ ಅತ್ಯಂತ ಮುಖ್ಯವಾಗಿದೆ. ಹಾಗಾಗಿ ಅವರ ಸೇವೆ ಮತ್ತು ಕೊಡುಗೆಗೆ ವಿಶೇಷ ಗೌರವ ನೀಡಲು ಈ ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಎಂಎಲ್‌ಸಿ ಶಶೀಲ್ ಜಿ ನಮೋಶಿ ಉದ್ಘಾಟಿಸಲಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಡಾ. ಬಿ.ಸುಶೀಲಾ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸೀಂಗ್ ಮೀನಾ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಪಂ ನ ಮಾಜಿ ಸದಸ್ಯ ರಾಜೇಶ ಜಗದೇವ ಗುತ್ತೇದಾರ, ಡಿಡಿಪಿಐ ಸೂರ್ಯಕಾಂತ ಮದಾನೆ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ, ಜಿಲ್ಲಾ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಭಾಗೀಯ ಉಪಾಧ್ಯಕ್ಷ ಶಿವಾನಂದ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ರಾಜ್ಯಮಟ್ಟದ ಆದರ್ಶ ಶಿಕ್ಷಕರು ಈ ಸಂದರ್ಭದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಧರ್ಮಣ್ಣ ಎಚ್.ಧನ್ನಿ ಹಾಗೂ ರಮೇಶ ಬಡಿಗೇರರನ್ನೂ ವಿಶೇಷವಾಗಿ ಸತ್ಕರಿಸಲಾಗುವುದು.

ಪ್ರಶಸ್ತಿ ಭಾಜನರಾದ ಶಿಕ್ಷಕರು :

ಪರಮೇಶ್ವರ ಓಕಳಿ, ಶಿವಪುತ್ರ ಕರಣೀಕ್, ಈರನಗೌಡ ಕೆ ಪಾಟೀಲ, ಮಹೇಶ ಟೆಂಗಳಿ, ಧೇನು ಎಲ್ ರಾಠೋಡ, ಸಾವಿತ್ರಿ ಬಡಿಗೇರ, ಸತ್ಯ ಅನುಸೂಯ ದೇವದುರ್ಗ, ಶೈಲಾ ಬಡಿಗೇರ, ಶರಣಬಸಪ್ಪ ನರೂಣಿ, ಸುನೀತಾ ರೆಡ್ಡಿ, ವಿಜಯಲಕ್ಷ್ಮೀ ಗದಲೇಗಾಂವ್, ಜಮುನಾಬಾಯಿ ಟಿಳ್ಳೆ, ಲತಾ ಕುಲಕರ್ಣಿ, ಮಹ್ಮದ್ ರಫೀಕ್, ರಾಧಾ ಪೋದ್ದಾರ, ಶಂಕರ ಬಿರಾದಾರ, ಸೂಗುರೇಶ್ವರ ಮಠಪತಿ, ಸುಮಂಗಲಾ ನಿಂಬಾಳ್ಕರ್, ಭಾಗಣ್ಣ ಗುಡ್ಡೋಡಗಿ, ಮಹ್ಮದ್ ರಫಿ ಎಂ., ನಾಗೇಂದ್ರ ಹೊಟ್ಟಿ, ಶಮೀಮ್ ಅಖ್ತರ್, ರಾಜಕುಮಾರ ಚಿಚಕೋಟೆ, ಭವಾನಿ ಚಟ್ನಳ್ಳಿ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News