×
Ad

ಕಲಬುರಗಿ | ಡಾ.ಬಾಬು ಜಗಜೀವನ್ ರಾಮ್ ಜಯಂತೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

Update: 2025-03-02 21:59 IST

ಕಲಬುರಗಿ : ದೇಶದ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತೋತ್ಸವ ಆಚರಣೆ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ರಂಜಿತ್ ಮೂಲಿಮನಿ, ಕಾರ್ಯಧ್ಯಕ್ಷರಾಗಿ ಪ್ರಹ್ಲಾದ್ ಹಡಗಿಲಕರ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಉಮೇಶ್ ಮಾಳಿಗೆ ಹಾಗೂ ಉಪಾಧ್ಯಕ್ಷರಾಗಿ ಗಣೇಶ ಕಟ್ಟಿಮನಿ ಮೆಳಕುಂದಿ ಅವರನ್ನು ಆಯ್ಕೆ ಮಾಡಲಾಯಿತು.

ನಗರದ ಗುಲ್ಲಾಬಾಡಿ ಸಮುದಾಯ ಭವನದಲ್ಲಿ ಸಮಿತಿಯ ಮುಖಂಡರ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಬಳಿಕ ನಗರದ ಬಾಬು ಜಗಜೀವನ್ ರಾವ್ ಪ್ರತಿಮೆ ಆವರಣದಲ್ಲಿ ರಂಜಿತ ಮೂಲಿಮನಿ, ಪ್ರಹ್ಲಾದ್ ಹಡಗಿಲಕರ್, ಉಮೇಶ್ ಮಾಳಿಗೆ, ಗಣೇಶ್ ಕಟ್ಟಿಮನಿ ಮೆಳಕುಂದಿ ಅವರನ್ನು ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಲಿಂಗರಾಜ ತಾರಫೈಲ್, ಶಾಮ ನಾಟೇಕರ್, ರಾಜು ವಾಡೆಕರ್, ನಾಗರಾಜ ಗುಂಡಗುರ್ತಿ, ರಮೇಶ್ ವಾಡೆಕರ್, ಮಲ್ಲಿಕಾರ್ಜುನ್ ಜಿನಕೇರಿ, ಪ್ರಕಾಶ ಮಾಳಿಗೆ, ದಶರಥ ಕಲಗುರ್ತಿ, ರಾಜು ಕಟ್ಟಿಮನಿ, ಪ್ರದೀಪ್ ಬಚನಾಳಕರ್, ರವಿ ಹೊಸಮನಿ, ದತ್ತು ಹಯ್ಯಾಳಕರ್, ದತ್ತು ಬಾಸಗಿ, ನಾಗೇಂದ್ರಪ್ಪ ದಂಡತಿಕರ್, ಚಂದ್ರಕಾಂತ್ ನಾಟೀಕಾರ, ಶಿವಕುಮಾರ್ ಆಜಾದಪುರ್, ದಿಗಂಬರ್ ತ್ರಿಮೂರ್ತಿ, ಬಸವರಾಜ ಜವಳಿ, ಬಸವರಾಜ ಬಾಡಿಯಾಳ ಗಾಜಿಪುರ, ಮಲ್ಲಪ್ಪ ಚಿಗನೂರ, ಮಲ್ಲಿಕಾರ್ಜುನ ದೊಡಮನಿ, ಬಂಡೇಶ ರಟ್ನಡಗಿ, ದೇವರಾಜ ಕೋಳ್ಳೂರ, ಚಂದ್ರಕಾಂತ ನಾಟೀಕಾರ, ಶ್ರೀನಿವಾಸ ರಾಮನಾಳಕರ್, ದೇವಿಂದ್ರ ಕವಳೇಕರ್, ದೇವಿಂದ್ರ ಬಿಳವಾರ, ಲಕ್ಕಪ್ಪ ಬಂಡಾರಿ, ಸಚೀನ್ ಕಟ್ಟಿಮನಿ, ಶಿವಶಂಕರ ದೊಡ್ಡಮನಿ, ಮಹೇಶ ಮೂಲಿಮನಿ, ಮಂಜುನಾಥ ನಾಲವಾರಕರ್, ಸಿದ್ರಾಮ ಅವರಳ್ಳಿ, ಸಿದ್ದು ಗುಲ್ಲಾಬಾಡಿ, ಮಲ್ಲಪ್ಪ ಅವಂಟೆ, ಸೈಬಣ್ಣ ಹೀರಾಪೂರ, ಚಂದಪ್ಪ ಕಟ್ಟಿಮನಿ, ಸಂಜು ಕಟ್ಟಿಮನಿ, ರಾಜೇಶ ಹಡಗಿಲಕರ್, ರಾಜು ಮದರಾ (ಬಿ), ಪ್ರದೀಪ ಭಾವೆ, ಶ್ರೀಮಂತ ಭಂಡಾರಿ, ಲೋಕೆಶ ಜಾಜಿ, ಗುಂಡು ಸಂಗ್ವಾರ, ಪೃಥ್ವಿರಾಜ ರಾಂಪೂರೆ, ಜಾನ ಶಿವನೂರ, ನಾಗೇಶ ಕಟ್ಟಿಮನಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News