ಕಲಬುರಗಿ | ಕೆಪಿಆರ್‌ಎಸ್ ಹೋರಾಟಕ್ಕೆ ಎಸ್‍ಎಫ್‍ಐ ಸಂಘಟನೆ ಬೆಂಬಲ
Update: 2025-09-10 20:46 IST
ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕೆಪಿಆರ್‌ಎಸ್ ಸಂಘಟನೆಯಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ನಷ್ಟ ಸಮೀಕ್ಷೆ ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ 10 ನೇ ದಿನದ ಹೋರಾಟಕ್ಕೆ ಎಸ್‍ಎಫ್‍ಐ ಸಂಘಟನೆಯ ಪದಾಧಿಕಾರಿಗಳು ಬೆಂಬಲಿಸಿ ಸತ್ಯಾಗ್ರಹ ನಡೆಸಿದರು.
ಹಿಂದಿನ ಬಾಕಿ ಬೆಳೆ ವಿಮೆ ಪಡೆಯಲು ಅಗತ್ಯ ಕ್ರಮ, ರೈತರ ಖಾಸಗಿ ಸೇರಿ ಎಲ್ಲ ಸಾಲಮನ್ನಾ, ಎಕರೆಗೆ ಕನಿಷ್ಟ 25 ಸಾವಿರ ರೂ. ಪರಿಹಾರ ನೀಡುವುದು, ಉಚಿತ ಬೀಜ, ಗೊಬ್ಬರ, ಕ್ರಿಮಿನಾಶಕ ಒದಗಿಸಬೇಕೆಂದು ಆಗ್ರಹಿಸಿ ರೈತರು ಸಾಮೂಹಿಕವಾಗಿ ಅಹೋರಾತ್ರಿ ಧರಣಿ ಮುಂದುವರೆದಿದೆ.
ಈ ಸಂದರ್ಭದಲ್ಲಿ ಶಿವಶರಣ ಮೂಳೆಗಾಂವ್, ಶರಣಬಸಪ್ಪ ಮಮಶೆಟ್ಟಿ, ಅಲ್ತಾಫ ಇನಾಮಂದಾರ, ಸುಜಾತ ಸೇರಿದಂತೆ ಅನೇಕ ರೈತ ಮುಖಂಡರು, ವಿದ್ಯಾರ್ಥಿಗಳು ಇದ್ದರು.