ಕಲಬುರಗಿ| ಶಿಸ್ತು, ಸಮಯಪ್ರಜ್ಞೆ, ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಶಿವಶರಣಪ್ಪ ಮೂಳೆಗಾಂವ್ ಸಲಹೆ
ಕಲಬುರಗಿ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು , ಸಮಯಪ್ರಜ್ಞೆ, ವಿನಯತೆಯ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ನಿವೃತ್ತ ಜಂಟಿ ನಿರ್ದೇಶಕರಾದ ಶಿವಶರಣಪ್ಪ ಮೂಳೆಗಾಂವ್ ಹೇಳಿದರು.
ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷದ ವಿದ್ಯಾರ್ಥಿಗಳ ವತಿಯಿಂದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯೊಂದಿಗೆ ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರಬೇಕು. ಓದು ಬರಹ ಪ್ರಾಮಾಣಿಕತೆಯಿಂದ ಮಾಡಿದರೆ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಾಯಣದ ಮಾಜಿ ನಿರ್ದೇಶಕರಾದ ಪ್ರಭಾಕರ್ ಜೋಶಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಓದಿನಲ್ಲಿ ಕೊಡಬೇಕು. ಶಿಕ್ಷಕರ ಹೇಳಿದ ವಿಷಯವನ್ನು ಸರಿಯಾದ ರೀತಿಯಿಂದ ಆಲಿಸಬೇಕು. ಪ್ರತಿಯೊಂದು ವಿಷಯವನ್ನು ಓದಿ ಮನನ ಮಾಡಿಕೊಳ್ಳಬೇಕು. ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸತ್ಯಂ ಪಿಯು ಕಾಲೇಜಿನ ಪ್ರಾಂಶುಪಾಲ ಬಿ .ಎಚ್. ನಿರಗುಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಸಂತೋಷ ಪಿಳ್ಳೆ, ಮಹೇಶ್ ಗಡಗಿ, ಡಾ.ಸುಲೋಚನಾ ಅಂಕಲಗಿ, ರೂಪಾ ಕುಲಕರ್ಣಿ, ನಿರ್ಮಲಾ ಜಾವಳಿ, ರಾಜೆಶ್ರೀ ಸಾಲಿಮಠ. ವಿಶ್ವಜ್ಯೋತಿ ಮಠ, ಕಾಶಿನಾಥ ಪಂಚಾಳ ಅನೇಕರು ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ವಿಜಯಲಕ್ಷ್ಮಿ, ಸಮೃದ್ಧಿ, ಐಶ್ವರ್ಯ, ರೇವಣಸಿದ್ಧ, ಶಿವರಾಜ್ ಕಾಲೇಜಿನ ಅನುಭವಗಳನ್ನು ಹೇಳಿಕೊಂಡರು.
ಕಾರ್ಯಕ್ರಮವನ್ನು ಮೇಘನಾ ನಿರ್ವಹಿಸಿದರು. ಸ್ವಾಗತ ಲಕ್ಷ್ಮಿ ಸ್ವಾಗತಿಸಿದರು. ಪುಷ್ಪಾ ಹಾಗೂ ವರ್ಷಾ ವಂದಿಸಿದರು.