ಕಲಬುರಗಿ| ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಕಿರುಚಿತ್ರ ಸ್ಪರ್ಧೆ
ಸಾಂದರ್ಭಿಕ ಚಿತ್ರ
ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನ ನೀಡಲು ಹಾಗೂ ಪ್ರಚಾರ ಪಡಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳು, ಸಂಸ್ಕೃತಿ, ಆಹಾರ, ಸಂಪ್ರದಾಯದ ಮೇಲೆ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಪ್ರಥಮ ಬಹುಮಾನ 10,000 ರೂ., ದ್ವಿತೀಯ 6000 ರೂ. ಹಾಗೂ ತೃತೀಯ 4000 ರೂ.ಗಳ ಬಹುಮಾನವನ್ನು ಹಾಗೂ ಇತರೆ ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ.
ಈ ಕಿರುಚಿತ್ರದ (ವ್ಲಾಗ್) ವಿಷಯವು ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ, ಸಂಸ್ಕೃತಿ, ಆಹಾರ, ಪ್ರವಾಸಿ ತಾಣ ಮತ್ತು ಕಲಬುರಗಿ ಸಂಪ್ರದಾಯದ ಮೇಲೆ ಆಧಾರಿತವಾಗಿರಬೇಕು. ಕಿರುಚಿತ್ರ (ವ್ಲಾಗ್) ಕನ್ನಡ ಭಾಷೆಯಲ್ಲಿರಬೇಕು ಹಾಗೂ ಆಂಗ್ಲ ಭಾಷೆಯ ಉಪ ಶೀರ್ಷಿಕೆ ಒಳಗೊಂಡಿರಬೇಕು.
ಈ ಸ್ಪರ್ಧೆಯ ಪ್ರವೇಶವು ಆನ್‍ಲೈನ್ ಮೂಲಕ ಇರಲಿದ್ದು, ಎಲ್ಲರಿಗೂ ಮುಕ್ತವಾಗಿರುತ್ತದೆ. ವ್ಲಾಗ್ ಕಿರುಚಿತ್ರದ ಅವಧಿಯು 05 ನಿಮಿಷ ಒಳಗಾಗಿರಬೇಕು. ಈ ಕಿರುಚಿತ್ರವು ದಿನಾಂಕ: 01-09-2025 ರಿಂದ ದಿನಾಂಕ:17-09-2025 ರ ಅವಧಿಯಲ್ಲಿ ಸೃಜನೆಯಾಗಿರಬೇಕು.