ಕಲಬುರಗಿ | ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 72ನೇ ಬಲಿದಾನ್ ದಿವಸ್ ಆಚರಣೆ
Update: 2025-06-23 18:40 IST
ಕಲಬುರಗಿ: ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 72 ನೇ ಬಲಿದಾನ್ ದಿವಸ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಅಶೋಕ್ ಬಗಲಿ, ಮಾಜಿ MLC ಅಮರನಾಥ್ ಪಾಟೀಲ್, ಶಿವರಾಜ್ ಪಾಟೀಲ್, ಉಮೇಶ್ ಪಾಟೀಲ್ (ನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿಗಳು), ಶರಣಪ್ಪ ತಳವಾರ, ಧರ್ಮಣ್ಣ ಇಟ್ಗ, ಆನಂದ್ ಪಾಟೀಲ್, ವಿಜಯಕುಮಾರ್ ಚಂಗ್ತಿ (ಚಿಂಚೋಳಿ), ವಿದ್ಯಾಧರ್ ಮಂಗಳೂರು (ಅಫಜಲಪುರ), ವರ್ಧಶಂಕರ್ ಶಟ್ಟಿ (ಕಲಬುರಗಿ ಉತ್ತರ), ಸಂತೋಷ್ ಹಾದಿಮನಿ (ಜಿಲ್ಲಾ ಕಾರ್ಯದರ್ಶಿ), ವೀರೂ ಪಾಟೀಲ್ ರಾಯ್ಕೋಡ್ ಸೇರಿದಂತೆ ಇನ್ನಿತರರು ಇದ್ದರು.