×
Ad

ಕಲಬುರಗಿ | ರಾಜ್ಯ ಸರ್ಕಾರಿ‌ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದಲಿಂಗಯ್ಯ ಮಠಪತಿ ನೇಮಕ

Update: 2025-03-10 18:35 IST

ಕಲಬುರಗಿ : ಕರ್ನಾಟಕ ರಾಜ್ಯ ಸರ್ಕಾರಿ‌ ನೌಕರರ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಕಲಬುರಗಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಲಿಂಗಯ್ಯ ಮಠಪತಿ ಅವರನ್ನು ನೇಮಿಸಿ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ವಿಮಾ ಇಲಾಖೆಯ ಕಲಬುರಗಿ ಜಿಲ್ಲಾ ಕಚೇರಿಯ ಅಧೀಕ್ಷಕರಾಗಿರುವ ಸಿದ್ದಲಿಂಗಯ್ಯ ಮಠಪತಿ ಅವರು ಕಳೆದ ಅವಧಿಯಲ್ಲಿ ಕಲಬುರಗಿ ಜಿಲ್ಲಾ ಸರ್ಕಾರಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನಿರ್ವಹಿಸಿದ ಸೇವೆಯನ್ನು ಪರಿಗಣಿಸಿ ಅವರನ್ನು ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಈ ಹಿಂದೆಯೂ 2019-24 ಅವಧಿಗೆ ಸಿದ್ದಲಿಂಗಯ್ಯ ಮಠಪತಿ ಅವರು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ‌ ಅನುಭವ ಹೊಂದಿದ್ದು, ಇದೀಗ ಪುನ: ಅವರನ್ನು ನಾಮನಿರ್ದೇಶನ ಮಾಡಿ ಕಲ್ಯಾಣ ಕರ್ನಾಟಕ‌ ಭಾಗದಲ್ಲಿ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಸಿ.ಎಸ್.ಷಡಾಕ್ಷರಿ ಅವರು ತಿಳಿಸಿದ್ದಾರೆ.

ಧನ್ಯವಾದ ತಿಳಿಸಿದ ಮಠಪತಿ :

ಸರ್ಕಾರಿ‌ ನೌಕರರ ಸೇವೆ ಮಾಡಲು ತಮ್ಮನ್ನು ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡಿದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳೂಂಡಗಿ ಮತ್ತು ನಿಕಟಪೂರ್ವ ಅಧ್ಯಕ್ಷ ರಾಜು ಲೆಂಗಟಿ ಸೇರಿದಂತೆ‌ ಸಮಸ್ತ ಜಿಲ್ಲೆಯ‌ ನೌಕರರಿಗೆ ಸಿದ್ಧಲಿಂಗಯ್ಯ ಮಠಪತಿ ಅವರು ಧನ್ಯವಾದ ತಿಳಿಸಿದ್ದಾರೆ.

ಡಿಸಿ ಗಳಿಂದ ಶುಭಾಷಯ :

ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರನ್ನು ಸೋಮವಾರ ಸಿದ್ದಲಿಂಗಯ್ಯ ಮಠಪತಿ ಅವರು ಔಪಚಾರಿಕವಾಗಿ ಭೇಟಿಯಾಗಿ ರಾಜ್ಯ ಸಂಘಕ್ಕೆ ತಾವು ನೇಮಕವಾದ ವಿಷಯ ತಿಳಿಸಿದರು. ನೌಕರರ ಸೇವೆ ಮಾಡಲು ಸಿಕ್ಕಿರುವ ಅಪೂರ್ವ ಅವಕಾಶ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿ ಸಿದ್ದಲಿಂಗಯ್ಯ ಮಠಪತಿ ಅವರಿಗೆ ಡಿಸಿ ಅವರು ಶುಭ ಕೋರಿ ಸನ್ಮಾನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News