×
Ad

ಕಲಬುರಗಿ | ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಅವಶ್ಯಕ: ಬಸವರಾಜ ಹೆಳವರ

Update: 2025-06-27 17:43 IST

ಕಲಬುರಗಿ: ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯ ವತಿಯಿಂದ ಜೂನ್ ತಿಂಗಳ "ನಿಧಿ ಆಪ್ಕೆ ನಿಕಟ್" ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮ ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ನೋಡಲ್‌ ಅಧಿಕಾರಿ ಬಸವರಾಜ ಹೆಳವರ ಅವರು ಮಾತನಾಡಿ, ಉದ್ಯೋಗದಾತರಿಲ್ಲದೇ ಪಿ.ಎಫ್ ಖಾತೆಗಳನ್ನು ವರ್ಗಾವಣೆ ಮಾಡಬಹುದು. ಬ್ಯಾಂಕ್ ಪಾಸ್‌ಬುಕ್ ಅಥವಾ ಬ್ಯಾಂಕ್ ಚೆಕ್ ಪ್ರತಿ ಅಪಲೋಡ್ ಮಾಡದೇ ಆನ್ಲೈನ್ ಕ್ಲೇಮ ಸಲ್ಲಿಸಬಹುದು. ಕೈಗಾರಿಕೆಗಳಲ್ಲಿ ಅಪಘಾತವಾದಾಗ ಇ.ಪಿ.ಎಫ್ ಇಲಾಖೆ ಕೂಡಲೇ ಸ್ಥಳಕ್ಕೆ ಧಾವಿಸಿ ಮೃತರ ಕುಟುಂಬಕ್ಕೆ ಅರ್ಹ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದರು.

ಸುಮಾರು 5 ಲಕ್ಷಗಳವರೆಗೆ ಪಿ.ಎಫ್ ಕ್ಲೇಮಗಳನ್ನು ಅಟೋ ಸೆಟಲ್ ಮೆಂಟ್‌ ಮಾಡಲಾಗುತ್ತಿದೆ. ಪ್ರಧಾನ ಕಚೇರಿಯಿಂದಲೇ ಭವಿಷ್ಯನಿಧಿ ಪಿಂಚಣಿದಾರರಿಗೆ ಪ್ರತಿ ತಿಂಗಳು ಪಿಂಚಣಿಯನ್ನು ಜಮಾ ಮಾಡಲಾಗುತ್ತಿದೆ. ಸದಸ್ಯರ ಪ್ರೊಪೈಲಗಳನ್ನು ಸ್ವಯಂ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಭವಿಷ್ಯ ನಿಧಿ ಸದಸ್ಯರ ವಿವಿಧ ಬಗೆಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು ಹಾಗೂ ಸಾಮಾಜಿಕ ಭದ್ರತಾ ಪ್ರಯೋಜನಗಳ ಮಹತ್ವ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಆರ್ ಪಾಟೀಲ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಪ್ರಾಧ್ಯಾಪಕ ಸಂಜುಕುಮಾರ ಮಾಕಲ ವಂದಿಸಿದರು.

ಕಾರ್ಯಕ್ರಮದಲ್ಲಿ ಇ.ಪಿ.ಎಫ್ ಪ್ರಾದೇಶಿಕ ಸಮಿತಿ ಸದಸ್ಯ ಶಂಕರ ಸುಲೆಗಾಂವ, ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ.ಭಾರತಿ ಹರಸೂರ, ಡಾ. ಸಿದ್ದಲಿಂಗ ಹೊಟ್ಟಿ, ಸಿಬ್ಬಂದಿಗಳಾದ ಪ್ರಿಯಾಂಕ ಪಾಟೀಲ್, ವಿನೋದ ಪಾಟೀಲ್, ಸುಜಯ ಬಿಸ್ವಾಸ ಹಾಗೂ ಕಾಲೇಜಿನ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News