×
Ad

ಕಲಬುರಗಿ | ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಒಗ್ಗಟ್ಟಿನ ಪ್ರತಿಭಟನೆ

Update: 2025-04-05 22:07 IST

ಕಲಬುರಗಿ : ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ವಿವಾದಿತ ನೂತನ ವಕ್ಫ್ ತಿದ್ದುಪಡೆ ಮಸೂದೆ ವಿರುದ್ಧ ಮುಂದಿನ ಜನ ಜಾಗೃತಿ ಮತ್ತು ಚಳುವಳಿಯ ರೂಪರೇಶಗಳ ಕುರಿತು ಶನಿವಾರ ಅಲ್ ಇಂಡಿಯಾ ಮಿಲಿ ಕೌನ್ಸಿಲ್ ಸಂಸ್ಥಾಪಕ ಸದಸ್ಯ ಮತ್ತು ವಿಶೇಷ ಆಹ್ವಾನಿತ ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಡಾ.ಅಜಗರ್ ಚುಲಬುಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ನೂರ್ ಬಾಗ್ನ ಚಲ್ಬಾಲ್ ಗಾರ್ಡನ್ ನಲ್ಲಿ ವಿದ್ವಾಂಸರು ಮತ್ತು ಬುದ್ಧಿಜೀವಿಗಳ ಸಮಾಲೋಚನಾ ಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಒಗ್ಗಟ್ಟಿನ ಪ್ರತಿಭಟನೆಯನ್ನು ಆಯೋಜಿಸುವ ಬಗ್ಗೆ ನಿರ್ಧರಿಸಲಾಯಿತು. ಬಿಜೆಪಿ ಸರಕಾರ ಮುಸ್ಲಿಮರ ವಿರುದ್ಧ ಸಿಎಎ,ತ್ರಿವಳಿ ತಲಾಖ್, ಯುಜಿಸಿ, ಹಿಜಾಬ್, ಬುಲ್ಡೋಜರ್, ಬಾಬರಿ ಮಸೀದಿ ಧ್ವಂಸ, ದರ್ಗಾ ಹೆಸರಲ್ಲಿ ವಿವಾದ ಸೃಷ್ಠಿ ಮತ್ತು ಮುಸ್ಲಿಮರ ವಿರುದ್ಧ ಬಿಜೆಪಿ ಸದಸ್ಯರ ನಿರಂತರ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ವಕ್ಫ್ ಸಂರಕ್ಷಣಾ ಸಮಿತಿಯನ್ನು ರಚಿಸಿ, ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಎಲ್ಲಾ ಸಂಘಟನೆಗಳ ಸಹಯೋಗದೊಂದಿಗೆ ಒಗ್ಗಟ್ಟಿನ ಪ್ರತಿಭಟನೆಯನ್ನು ಆಯೋಜಿಸಲು ತಾಲೂಕುಗಳಲ್ಲಿಯೂ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಜಂಟಿ ಮತ್ತು ಒಗ್ಗಟ್ಟಿನ ಹೋರಾಟ ಆಯೋಜಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ, ವಕ್ಫ್ ರಕ್ಷಣಾ ಸಮಿತಿಯು ಎಲ್ಲಾ ಸಂಸ್ಥೆಗಳ ಜವಾಬ್ದಾರಿಯುತ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ ಮತ್ತು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ನಿರಂತರ ಪ್ರತಿಭಟನೆಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಬಗ್ಗೆ ಸಾರ್ವಜನಿಕ ಸಭೆಗಳು ಆಯೋಜಿಸುವುದರ ಜೊತೆಗೆ, ವಕ್ಫ್ ತಿದ್ದುಪಡಿ ಮಸೂದೆಯಿಂದ ಉಂಟಾಗುವ ನಷ್ಟಗಳ ಬಗ್ಗೆ ಸಾಮಾನ್ಯ ಮುಸ್ಲಿಮರಿಗೆ ಅರಿವು ಮೂಡಿಸುವ ಮೂಲಕ ವಕ್ಫ್ ರಕ್ಷಣೆಗಾಗಿ ಸಾಮಾನ್ಯ ಮುಸ್ಲಿಮರಲ್ಲಿ ಜಾಗೃತಿ ಮೂಡಿಸಬೇಕೆಂದು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಸಭೆಯಲ್ಲಿ ಮೌಲಾನಾ ಸೈಯದ್ ಅಬ್ದುಲ್ ಹಕೀಂ ವಕಾರ್ ಅಶ್ರಫಿ, ಮೌಲಾನಾ ಜಾವೇದ್ ಆಲಂ ಖಾಸ್ಮಿ, ಮೌಲಾನಾ ಮೌಲಾನಾ ಮುಹಮ್ಮದ್ ಗೌಸ್ ಖಾಸ್ಮಿ, ಹಫೀಝ್ ಮುಹಮ್ಮದ್ ಓವೈಸ್ ಖಾದ್ರಿ, ಮೌಲಾನಾ ಅಬ್ದುಲ್ ಹಮೀದ್ ಬಾಖ್ವಿ ಖಾಸ್ಮಿ ಮತ್ತು ಮಅರ್ಫಿ ದಾನಿಶ್ ಮೌಲಾನಾ ಮುಹಮ್ಮದ್ ಶಫೀಕ್ ಖಾಸ್ಮಿ, ಹಿರಿಯ ಪತ್ರಕರ್ತ ಅಝುಲ್ಲಾ, ಅದ್ಝುಲ್ಲಾ, ಗೋಲ್ಕಂಡಿ, ಇಂಜಿನಿಯರ್ ಡಾ.ಸೈಯದ್ ಸೈಯದ್ ಸಖಿ, ಸರ್ಮಸ್ತ್, ಇಂಜಿನಿಯರ್ ಮುಷ್ತಾಕ್ ಅಹ್ಮದ್ ಆದಿಲ್ ಸುಲೇಮಾನ್ ಸೇಠ್, ರಿಜ್ವಾನ್-ಉರ್-ರೆಹಮಾನ್ ಸಿದ್ದಿಕಿ, ಹೈದರ್ ಅಲಿ ಬಾಗ್ಬಾನ್ ಜವಾದ್. ಮೀರ್ ಪತ್ರಕರ್ತ ಮುಬೀನ್ ಅಹ್ಮದ್ ಝಾಮ್, ಪತ್ರಕರ್ತ ಸಾದಿಕ್ ಜಲೀಲ್ ಜುನೈದ್, ಮೌಲಾನಾ ಮಜರುಲ್ ಖಾದ್ರಿ, ಹಫೀಜ್ ಖಾಸಿಂ ಜುನೈದ್, ಹಾಫಿಜ್ ಶೇಖ್ ಶಾ ವಲಿ ಮತ್ತು ಇತರ ಸಂಗಡಿಗರು ಸಭೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News