ಕಲಬುರಗಿ | ಮಗನ ಹತ್ಯೆ ಪ್ರಕರಣ : ತಂದೆಗೆ ಜೀವಾವಧಿ ಶಿಕ್ಷೆ
Update: 2025-10-29 19:16 IST
ಕಲಬುರಗಿ: ಕ್ಷುಲ್ಲಕ ಕಾರಣಕ್ಕಾಗಿ ಮಗನ ಹತ್ಯೆ ಮಾಡಿದ ಅಪರಾಧಿ ತಂದೆಗೆ ಕಲಬುರಗಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಜೀವಾವಧಿ ಶಿಕ್ಷೆ ಮತ್ತು 10,500 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ತಾಜನಗರದ ನಿವಾಸಿ ಮುಹಮ್ಮದ್ ಯೂಸುಫ್ ಮಹಾಗಂವ ವಾಡಿವಾಲೇ (42) ಶಿಕ್ಷೆಗೆ ಒಳಗಾದ ಅಪರಾಧಿ.
ತಂದೆ ಮತ್ತು ತಾಯಿ ನಡುವೆ ನಡೆಯುತ್ತಿರುವ ಜಗಳವನ್ನು ಬಿಡಿಸುವ ವೇಳೆ ಯೂಸುಫ್ ತನ್ನ ಮಗನಾದ ಅಸರಾರ ಅಹ್ಮದ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಸಾಬಿತಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ.
ಮೇ 31ಕ್ಕೆ ಚೌಕ್ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿತ್ತು. 3 ಜೂನ್ ರಂದು ಚಿಕಿತ್ಸೆ ಫಲಿಸಿದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ.