×
Ad

ಕಲಬುರಗಿ | ವಿವಸ್ತ್ರಗೊಳಿಸಿ ವ್ಯಕ್ತಿಯ ಹತ್ಯೆ ಪ್ರಕರಣ : ಓರ್ವ ಬಾಲಕ ಸೇರಿ ಮೂವರ ಬಂಧನ

Update: 2025-10-07 22:26 IST

ಸೈಬಣ್ಣಾ ಕುಂಬಾರ, ಸೈಬಣ್ಣ ಪುರದಾಳ

ಕಲಬುರಗಿ: ಇಲ್ಲಿನ ರಾಘವೇಂದ್ರ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿರುವ ಕುಷ್ಠರೋಗಿಗಳ ಕಾಲೊನಿಯಲ್ಲಿ ವ್ಯಕ್ತಿಯೊರ್ವನನ್ನು ವಿವಸ್ತ್ರಗೊಳಿಸಿ, ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಬಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಷ್ಠರೋಗಿಗಳ ಕಾಲೊನಿಯ ನಿವಾಸಿಗಳಾದ ಸೈಬಣ್ಣಾ ಕುಂಬಾರ (25), ಸೈಬಣ್ಣ ಪುರದಾಳ (22) ಹಾಗೂ 16 ವರ್ಷದ ಬಾಲಕ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ಕಾಲೊನಿಯ ನಿವಾಸಿ ಆಗಿರುವ ಆಟೋ ಚಾಲಕ ಚಾಂದ್‌ಸಾಬ್‌ ಮೂಲಗೆ ಎಂಬಾತನನ್ನು ಆತನ ಮನೆಯಲ್ಲೇ ವಿವಸ್ತ್ರಗೊಳಿಸಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪೊಲೀಸರು, ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಸೆ.20ರಂದು ನಗರದ ರಾಘವೇಂದ್ರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News