×
Ad

ಕಲಬುರಗಿ | 371ನೇ(ಜೆ) ಕಲಂ ಜಾರಿಗೆ ಬಂದ ಇತಿಹಾಸ ಮರೆಯಬಾರದು : ಶಾಸಕ ಅಲ್ಲಂಪ್ರಭು ಪಾಟೀಲ್

Update: 2025-05-20 23:03 IST

ಕಲಬುರಗಿ : ಹಿಂದುಳಿದ ಕಲ್ಯಾಣ ಕರ್ನಟಕ ಪ್ರದೇಶಕ್ಕೆ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಿ ಜಾರಿಗೆ ಮಾಡಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ನಿರಂತರ ಹೋರಾಟಗಳನ್ನು ಮಾಡಿರುವ ಹೋರಾಟಗಾರರನ್ನು, ಅದರಂತೆ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಬಲವಾದ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿದ ನಾಯಕರ ಇತಿಹಾಸ ವಿದ್ಯಾರ್ಥಿಗಳು ಮರೆಯಬಾರದು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಕ್ರಿಶ್ಚಿಯನ್ ಶಿಕ್ಷಣ ಮೇಳ, ಮತ್ತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ನಗರದ ಸೆಂಟ್ ಮೇರಿ ಸಭಾಂಗಣದಲ್ಲಿ ಕ್ರಿಶ್ಚಿಯನ್ ಸಮಾಜದ ವತಿಯಿಂದ ನಿಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 371ನೇ ಕಲಂ ಜಾರಿಗೆ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡ ಹಿರಿಯ ಹೋರಾಟಗಾರರಾದ ಡಾ.ಲಕ್ಷ್ಮಣ ದಸ್ತಿಯವರಿಗೆ ಗೌರವ ಸನ್ಮಾನ ಸಲ್ಲಿಸಿ ಮಾತನಾಡಿದರು.

ದಿ.ವೈಜನಾಥ ಪಾಟೀಲ್ ಸೇರಿದಂತೆ ಡಾ ಲಕ್ಷ್ಮಣ ದಸ್ತಿಯವರು ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ, ಸಂಘ ಸಂಸ್ಥೆಗಳ, ಸಂಘಟನೆಗಳ ಸಹಯೋಗದಿಂದ ದಶಕಗಳ ಕಾಲ ಹೋರಾಟ ನಡೆಸಿ, ಮಹತ್ವದ ಬೇಡಿಕೆಯ ವಿಷಯಕ್ಕೆ ಜನಾಭಿಪ್ರಾಯ ಮೂಡಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಕೂಗು ಮುಟ್ಟಿಸಿರುವುದು ಇತಿಹಾಸ ಸಾಕ್ಷಿಯಾಗಿದೆ ಎಂದರು.

ಈ ಹೋರಾಟಕ್ಕೆ ಸ್ಪಂದಿಸಿ ಮಲ್ಲಿಕಾರ್ಜುನ ಖರ್ಗೆಯವರು, ಧರಮ್ಸಿಂಗ್ ಅವರನ್ನು ಜೊತೆಗಿಟ್ಟುಕೊಂಡು 371ನೇ ಕಲಂ ಜಾರಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿ ವಿಶೇಷ ಮುತುವರ್ಜಿಯಿಂದ ಬಲವಾದ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಿದ ಕಾರಣವೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಂವಿಧಾನದ 371ನೇ(ಜೆ) ಕಲಂ ಜಾರಿಗೆ ಬಂದಿದೆ. ಕಲ್ಯಾಣ ಕರ್ನಾಟಕದ ಈ ಮಹತ್ವದ ಇತಿಹಾಸ ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ತಿಳಿಸಿದರು.

ಕೆ.ಕೆ.ಆರ್.ಡಿ.ಬಿ. ಅಪರ ನಿರ್ದೇಶಕರಾದ ಪ್ರವೀಣ ಪ್ರೀಯಾ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿಯವರು ಶಿಕ್ಷಣ ಮೇಳವನ್ನು ಉದ್ದೇಶಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಕ್ರಿಶ್ಚಿಯನ್ ಶಿಕ್ಷಣ ಮೇಳ ಆಯೋಜನೆಯ ಪ್ರಧಾನ ಸಂಯೋಜಕರಾದ ಸಂಧ್ಯಾರಾಜ ಸ್ಯಾಮ್ಯೂವೆಲ್ ರವರು ಮೇಳದ ಆಯೋಜನೆಯ ಉದ್ದೇಶ ಮತ್ತು ಇದರಲ್ಲಿ ಭಾಗವಹಿಸಿದ ಆಯಾ ಇಲಾಖೆಗಳು ಮತ್ತು ತಂಡಗಳ ಬಗ್ಗೆ ವಿವರಣೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಫಾದರ್‌ ಸ್ಟ್ಯಾನಿ ಲೊಭೋ, ಫಾದರ್‌ ಜೋಸೆಫ್, ಡಾ.ಕಿರಣ ಸೇರಿದಂತೆ ಅನೇಕರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಆಯ್ದ ಕೆಲವು ಶಾಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.80 ರಿಂದ 98 ಪ್ರತಿಶತ ಅಂಕಗಳು ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಮಾಡಿ ಪ್ರಶಸ್ತಿ ಪತ್ರ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಆಯಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಆಯಾ ಕ್ಷೇತ್ರದ ಗಣ್ಯರು ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಕಾರ್ಯಕ್ರಮದ ಸಂಚಾಲಕರಾದ ಪರಶುರಾಮರವರು ನಡೆಸಿಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News