×
Ad

ಕಲಬುರಗಿ | ಸಮಾಜದಲ್ಲಿ ಕಲಾವಿದನ ಪಾತ್ರ ಪ್ರಮುಖ: ಅಬ್ದುಲ್ ಹಮೀದ್

Update: 2025-06-06 17:41 IST

ಕಲಬುರಗಿ: ಇಂದಿನ ಸಮಾಜದಲ್ಲಿ ಕಲಾವಿದರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಫರಾನ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಹಮೀದ್ ಹೇಳಿದರು.

ಅವರು ನಗರದಲ್ಲಿ ಮುಹಿಬನ್ನೆ ಉರ್ದು ಆಯೋಜಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ವಾರ್ಷಿಕ ಪ್ರಶಸ್ತಿ ಪುರಸ್ಕೃತ ರೆಹಮಾನ್ ಪಟೇಲ್ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಅಯಾಝುದ್ದೀನ್ ಪಟೇಲ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕಲಾವಿದರಿಂದ ಮುಂದಿನ ಪೀಳಿಗೆಗೆ ಇತಿಹಾಸ, ಕಲೆ, ಸಾಂಸ್ಕೃತಿಕ ಸೇರಿದಂತೆ ಇತರೆ ವಿಷಯಗಳನ್ನು ಪರಿಚಯಿಸುವ ದೊಡ್ಡ ಕಾರ್ಯ ಆಗಲಿದೆ ಎಂದರು.

ಮುಹಿಬನ್ನೆ ಉರ್ದು ಅಧ್ಯಕ್ಷ ಡಾ.ಫಹೀಮುದ್ದೀನ್ ಪೀರಝಾದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಅನೀಸ್ ಸಿದ್ದಿಕಿ, ಸದಸ್ಯ ಖಾಜಾ ಪಾಷಾ ಇನಾಮದಾರ ವೇದಿಕೆ ಹಂಚಿಕೊಂಡರು. ಸೈಯದ್ ತಯಾಬ್ ಅಲಿ, ಗಜಾನ್‌ಫರ್ ಇಕ್ಬಾಲ್, ರಿಜ್ವಾನ್ ಉರ್ ರೆಹಮಾನ್, ಮುಜೀಬ್ ಅಲಿ ಖಾನ್, ಯೂಸುಫ್, ಮುಬೀನ್ ಝಕಾಮ್ ಸೇರಿದಂತೆ ಮುಂತಾದ ಉರ್ದು ಬರಹಗಾರರು ಮತ್ತು ಬುದ್ಧಿಜೀವಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News