×
Ad

ಕಲಬುರಗಿ | ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳ ಮೂರು ಪುಸ್ತಕಗಳು ಲೋಕಾರ್ಪಣೆ

Update: 2025-03-18 16:32 IST

ಕಲಬುರಗಿ : ಸೋಮವಾರ ಸಂಜೆ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿ, 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರ ಕುರಿತಾದ ಮೂರು ಪುಸ್ತಕಗಳು ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪುಸ್ತಕಗಳ ಲೇಖಕರಿಗೆ ಹಾಗೂ ಸಂಪಾದಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಮಹಾಮನೆಯಲ್ಲಿ ಜರುಗಿದ ವರ್ಣರಂಜಿತ ಸಮಾರಂಭದಲ್ಲಿ, ಡಾ.ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿದಂತೆ ಶರಣಬಸವ ವಿವಿಯ ಉಪಕುಲಪತಿ ಡಾ. ಅನಿಲ ಕುಮಾರ ಬಿಡವೆ, ವಿವಿಯ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಹಾಗೂ ಇತರ ಗಣ್ಯರು ಸೇರಿ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ್ ಅವರು ಬರೆದ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಕುರಿತಾದ “ಪೂಜ್ಯ ದೊಡ್ಡಪ್ಪ ಅಪ್ಪಾ ಅವರ ಚಾರಿತ್ರಿಕ ಶತಕ” ಎಂಬ ಪುಸ್ತಕದಲ್ಲಿ, ಈ ಭಾಗದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಅಪಾರ ಕೊಡುಗೆಯನ್ನು ಎತ್ತಿ ತೋರಿಸಿದ್ದಾರೆ.

ಡಾ.ಶಿವರಾಜ್ ಶಾಸ್ತ್ರಿ ಹೇರೂರ ಅವರು ಬರೆದ “ಅನುಭವಿ ದಾಸೋಹಿ ಪೂಜ್ಯ ಡಾ ಶರಣಬಸವಪ್ಪ ಅಪ್ಪಾ” ಪುಸ್ತಕದಲ್ಲಿ ಡಾ.ಅಪ್ಪಾಜಿಯವರ ಜೀವನದ ವಿವಿಧ ಆಯಾಮಗಳನ್ನು ಹಾಗೂ ಅವರೊಂದಿಗಿರುವ ವೈಯಕ್ತಿಕ ಒಡನಾಟವನ್ನು ಅಕ್ಷರಗಳ ಮೂಲಕ ಮೂಡಿಬಂದಿದೆ.

ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಕುರಿತ ಮೂರನೇ ಪುಸ್ತಕ “ಚಿನ್ಮಯ ಜ್ಞಾನಿ ಚಿರಂಜೀವಿ” 9ನೇ ಪೀಠಾಧಿಪತಿಯ ಗಮನಾರ್ಹ ಗುಣಗಳು ಮತ್ತು ಅವರ ತಂದೆ ಹಾಗೂ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಚಿರಂಜೀವಿಯವರ ಕುರಿತು, ವಿವಿಧ ಲೇಖಕರಿಂದ ಬರಹ ಮತ್ತು ಕವನಗಳೊಂದಿಗೆ ಮೂಡಿಬಂದಿದೆ.

ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಡಾ.ಶರಣಬಸವಪ್ಪ ಅಪ್ಪಾಜಿ, ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪುಸ್ತಕಗಳನ್ನು ಪರಿಚಯಿಸಿದ ಪ್ರೊ.ವೆಂಕಣ್ಣ ಡೊಣ್ಣೇಗೌಡ, ಪ್ರೊ.ಕ್ಷೇಮಲಿಂಗ ಬಿರಾದಾರ್ ಮತ್ತು ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ಅವರು ಮೂರು ಪೀಠಾಧಿಪತಿಗಳ ವಿಶಿಷ್ಟ ಸದ್ಗುಣಗಳನ್ನು ವಿವರವಾಗಿ ಪುಸ್ತಕಗಳಲ್ಲಿ ಮುದ್ರಿಸಿದ್ದು, ಈ ಮೂರೂ ಪುಸ್ತಕಗಳನ್ನು ಎಲ್ಲರೂ ಓದಿ ಪುನೀತರಾಗಬೇಕೆಂದರು.

ಪೂಜ್ಯ ಡಾ.ಅಪ್ಪಾಜಿ ಮತ್ತು ಪೂಜ್ಯ ಡಾ.ಅವ್ವಾಜಿ ಅವರು ಎ.ಕೆ.ರಾಮೇಶ್ವರ್, ಡಾ. ಶಿವರಾಜ್ ಶಾಸ್ತ್ರಿ ಹೇರೂರ, ಮತ್ತು ಡಾ.ಸಾರಿಕಾದೇವಿ ಕಾಳಗಿ ಸೇರಿದಂತೆ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪುಸ್ತಕದ ಸಂಪಾದಕರು ಮತ್ತು ಇತರ ಲೇಖಕರನ್ನು ಸನ್ಮಾನಿಸಿದರು.

ಸಮಾರಂಭದಲ್ಲಿ ಬಸವರಾಜ ದೇಶಮುಖ ಎಲ್ಲರನ್ನೂ ಸ್ವಾಗತಿಸಿದರು. ಶರಣಬಸವ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಎಸ್.ಎಚ್.ಹೊನ್ನಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News