×
Ad

ಕಲಬುರಗಿ | ಮಹಿಳೆಯರನ್ನು ಗೌರವದಿಂದ ಕಾಣಿರಿ : ಡಾ.ನ್ಯಾ.ಶಿವರಾಜ ಪಾಟೀಲ

Update: 2025-03-22 17:28 IST

ಕಲಬುರಗಿ : ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಹಾಗೂ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ಡಾ.ಶಿವರಾಜ ಪಾಟೀಲ ಹೇಳಿದರು.

ಶುಕ್ರವಾರದಂದು ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ನ್ಯಾಯಾಂಗ ನೌಕರರ ಸಂಘ ಜಿಲ್ಲಾ ಶಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಪ್ರಾಧನಿಯಾಗಿದ್ದಾರೆ, ರಾಷ್ಟ್ರಪತಿಯಾಗಿದ್ದಾರೆ ಹಾಗೂ ಹಲವಾರು ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆಇದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ನಾನು ಕಳೆದ ಕೆಲವು ದಶಕದಿಂದ ಇದೇ ಜಿಲ್ಲಾ ಕೋರ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದೆ, ನಾನು ಹೆಮ್ಮೆಯಿಂದ ಕೆಲಸವನ್ನು ಮಾಡಿದ್ದೇನೆ ನನಗೆ ಸಂತೃಪ್ತಿ ತಂದಿದೆ ಎಂದರು.

ಕರ್ನಾಟಕ ಉಚ್ಫನ್ಯಾಯಲಯ ನ್ಯಾಯಮೂರ್ತಿ ಚಿಲ್ಲಕೂರ ಸುಮಲತಾ ಮಾತನಾಡಿ, ಭಾರತ ಸೇರಿದಂತೆ ವಿಶ್ವದಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಶ್ರಮಪಡುತ್ತಾರೆ. ಯಾವುದೇ ವೃತ್ತಿಯಲ್ಲಿ ಮಹಿಳೆಯರಿಗೆ ಅಡ್ಡಿಗಳು ಜಾಸ್ತಿ ಮದುವೆಯಾದಾಗ ವಿರಾಮ, ಗರ್ಭಿಣಿಯಾದಾಗ, ಹೆರಿಗೆಯಾದಾಗ ವೃತ್ತಿಗೆ ವಿರಾಮ ಪಡೆಯಬೇಕಾಗುತ್ತದೆ ಎಂದರು.

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಜ್ಯೋತಿಶ್ರಿ ಪಾಟೀಲ ಮಾತನಾಡಿ, ಮಹಿಳೆಯರು ಮೌಡ್ಯತೆ, ದಬ್ಬಾಳಿಕೆ ಖಂಡಿಸಬೇಕು. ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು. ಸಮಯ ಪ್ರಜ್ಞೆ ಮತ್ತು ತಾಳ್ಮೆ ರೂಢಿಸಿಕೊಂಡರೆ, ಜೀವನದಲ್ಲಿ ಸಂತೃಪ್ತಿ ನೆಮ್ಮದಿ ಕಾಣಲು ಸಾಧ್ಯ ಎಂದರು.

ಕರ್ನಾಟಕ ಉಚ್ಫ ನ್ಯಾಯಾಲಯ ಮತ್ತು ಆಡಳಿತಾತ್ಮಕ ಗೌರವಾನ್ವಿತ ನ್ಯಾ.ಕೆ.ನಟರಾಜ್‍ನ್ ಮಾತನಾಡಿರು.

ಕಲಬುರಗಿ ಜಿಲ್ಲಾ ಕಾನೂನು ಸೇವ ಪ್ರಾಧಿಕಾರ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎಲ್ಲ್ ಲಕ್ಷ್ಮೀನಾರಾಯ ಸ್ವಾಗತಿಸಿದರು.

ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ, ನ್ಯಾಯಾಂಗ ಇಲಾಖೆ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲಕುಮಾರ ಚಾಂದೆ ವೇದಿಕೆಯಲ್ಲಿದ್ದರು. ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News