ಕಲಬುರಗಿ | ತಂದೆಯ ನಿಧನದ ನೋವಿನಲ್ಲೂ ಎಸೆಸೆಲ್ಸಿ ಪರೀಕ್ಷೆ ಬರೆದ ಬಾಲಕಿಯರು
Update: 2025-03-26 22:20 IST
ಕಲಬುರಗಿ : ತಂದೆಯ ನಿಧನದ ನೋವಿನ ಮಧ್ಯೆಯೂ ಬಾಲಕಿಯರಿಬ್ಬರು ಎಸೆಸೆಲ್ಸಿ ಪರೀಕ್ಷೆ ಬರೆದಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಜಿಡಿಎ ಕಾಲೋನಿಯ ಫಿಲ್ಟರ್ ಬೆಡ್ ಪ್ರದೇಶದ ಕೃಷ್ಣ ನಗರದ ನಿವಾಸಿ ಪ್ರಕಾಶ್ ನಾಯಕ (50) ಹೃದಯಾಘಾತದಿಂದ ನಿಧನರಾಗಿದ್ದರು.
ಅಗಲಿಕೆಯ ಸುದ್ದಿಯ ಮಧ್ಯೆಯೂ ಧೃತಿಗೆಡದ ವಿದ್ಯಾರ್ಥಿನಿಯರಾದ ವಿದ್ಯಾಶ್ರೀ ಮತ್ತು ವಾಣಿಶ್ರೀ ಅವರು ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇಬ್ಬರೂ ಇಲ್ಲಿನ ಎಸ್ ಆರ್ ಮೆಹ್ತಾ ಸ್ಕೂಲಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.