×
Ad

ಕಲಬುರಗಿ | ಧಮ್ಮಜ್ಯೋತಿ ಕಾರ್ಯಕ್ರಮಕ್ಕೆ ವರ್ಷಾ ಜಾನೆ ಚಾಲನೆ

Update: 2025-10-14 20:12 IST

ಕಲಬುರಗಿ: 69ನೇ ಧಮ್ಮಚಕ್ರ ಪರಿವರ್ತನಾ ನಿಮಿತ್ಯ ಅಂಗವಾಗಿ ರಾಹುಲ್ ಯುವಕ ಸಂಘ ಬಸವನಗರ ವತಿಯಿಂದ ಧಮ್ಮಜ್ಯೋತಿ ಕಾರ್ಯಕ್ರಮವನ್ನು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ ಚಾಲನೆ ನೀಡಿದರು.

ಧಮ್ಮ ಜ್ಯೋತಿ ತಿಮ್ಮಾಪುರ ಮಾರ್ಗವಾಗಿ, ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಬಸವನಗರ ಕರುಣಾ ಬುದ್ದ ವಿಹಾರ ವರೆಗೆ ತೆರಳಿ ಬುದ್ಧ ವಂದನ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ರೇಣುಕಾ ಹೊಳ್ಕರ, ರಾಹುಲ ಯುವಕ ಸಂಘದ ಅಧ್ಯಕ್ಷ ಶಶಿಕಾಂತ್ ಮೂರ್ತಿ, ಸಿದ್ರಾಮ ಬೆಳಕೋಟಿ, ಸೂರ್ಯಕಾಂತ್ ನಿಂಬಳಕರ, ಹಣಮಂತ ಭೋದನ್, ದೇವೇಂದ್ರ ಸಿನ್ನೂರ್, ದಿನೇಶ್ ದೊಡ್ಡಮನಿ, ಮಹೇಶ್ ಸಂಗಾವಿ, ರಮೇಶ ಚಿಮ್ಮಯಿದ್ಲಾಯಿ, ವಿಜಯಕುಮಾರ್ ಶಿಂದೆ, ನವೀನ್ ಬಂಡೆ, ಜಯಾನಂದ್ ಕೊಳ್ಳುರ, ಸಿದ್ದಾರ್ಥ ಸಾಲುಂಕೆ, ಗೌತಮ ಬೇಡಜುರಾಗಿ, ದೇವರಾಜ ನಿಪ್ಪಾಣಿಕರ, ಪೀರಪ್ಪ ಹಾದಿಮನಿ, ಶಿವಕುಮಾರ್ ನಂದಿ, ಮಹೇಶ ಬೇಡಜುರಗಿ,ಕಿರಣ ಚಾರಿ, ಸಚಿನ್ ಬಂಡೆ, ಉಮೇಶ್ ಶೃಂಗೇರಿ, ನಿಂಗರಾಜ ಬಂಡೆ, ಪ್ರವೀಣ ತವಡೆ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News