ಕಲಬುರಗಿ | ವೈಜ್ಞಾನಿಕ ಮಾಹಿತಿ ಇದ್ದಲ್ಲಿ ಮಹಿಳೆಯ ಪ್ರಗತಿ ಸಾಧ್ಯ : ಡಾ.ಜಯಲಕ್ಷ್ಮಿ
ಕಲಬುರಗಿ : ಜಾಗತಿಕ ಕ್ಷೇತ್ರ ಸಾಮಾಜಿಕ, ವೈಜ್ಞಾನಿಕ, ಸಮಗ್ರ ಕೃಷಿ, ಉದ್ಯಮ ವಿಭಾಗದಲ್ಲಿ ಮುಂದುವರಿದಿದ್ದು, ಪೈಪೋಟಿ ಯುಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮಹಿಳೆ ಸದಾ ಕ್ರಿಯಾ ಶೀಲಾ ಮನೋಭಾವ ಹೊಂದಿ ಎಲ್ಲಾ ಇಲಾಖೆ ಮಾಹಿತಿ ಪಡೆದು ಬ್ಯಾಂಕ್, ಸರ್ಕಾರ, ಸರ್ಕಾರೆತರ ಸಂಸ್ಥೆ ಯೋಜನೆ ಯನ್ನು ಉಪಯೋಗಿಸಿ ಸ್ವಾವಲಂಬಿ ಮತ್ತು ಸದೃಢತೆ ಸಾಧಿಸಬೇಕು ಎಂದು ಕಲಬುರಗಿ ಕೃಷಿ ಕಾಲೇಜು ಸಸ್ಯ ರೋಗ ವಿಭಾಗ ಮುಖ್ಯ ಪ್ರಾಧ್ಯಾಪಕರಾದ ಡಾ.ಜಯಲಕ್ಷ್ಮಿ ಎಸ್.ಕೆ. ಹೇಳಿದರು.
ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ಯಲ್ಲಿ ಯೆನ್ ಆರ್ ಎಂ ಲ್ ಸಹಬಾಗಿತ್ವದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ, ಕೃಷಿ ಸಖಿಯರಿಗೆ ಉದ್ದೇಶಿಸಿ ಮಾತನಾಡಿದರು.
ದೇಶ, ವಿದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಮಹಿಳೆಯರ ಸಾಧನೆ ಯನ್ನು ಗುರುತಿಸಿ ಗೌರವಿಸಬೇಕು ಎಂದರು.
ತೋಟಗಾರಿಕೆ ವಿಜ್ಜಾನಿ ಡಾ.ಸನ್ಮತಿ ನಾಯಕ್ ಎ.ಟಿ.ಎಸ್. ಪ್ರಾಸ್ತವಿಕ ನುಡಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆದು ಬಂದ ಹಾದಿ, ಚರಿತ್ರೆ ಹಾಗೂ ಸಾಧನೆಗೈದ ಮಹಿಳೆಯರ ವಿವರ ನೀಡಿದರು.
ಕೆವಿಕೆ ಸಸ್ಯ ವಿಜ್ಜಾನಿ ಡಾ.ಜಹೀರ್ ಅಹಮದ್ ಮಾತನಾಡಿ, ಕಲಬುರಗಿ ಸರಸ್ ಮೇಳ ಯಶಸ್ಸು ನಾರಿ ಶಕ್ತಿಗೆ ಉತ್ತಮ ಉದಾಹರಣೆ ಎಂದು ತಿಳಿಸಿದರು.
ಮಣ್ಣು ವಿಜ್ಜಾನಿ ಡಾ.ಶ್ರೀನಿವಾಸ ಬಿ.ವಿ ಸ್ವಾಗತಿಸಿ ಪ್ರಸ್ತುತ ಬೇಸಿಗೆ ಯಲ್ಲಿ ಮಣ್ಣು ಪರೀಕ್ಷೆ ಸಕಾಲ ಹಾಗೂ ಬೇಸಾಯ ತಜ್ಜರಾದ ಡಾ.ಯೂಸುಫ್ ಅಲಿ ಎನ್ ನೈಸರ್ಗಿಕ ಕೃಷಿ ಕುರಿತು ಮಾಹಿತಿ ನೀಡಿದರು. ಕೃಷಿ ಜೀವನೋಪಾಯ ಮತ್ತು ಕೃಷಿ ಸಖಿ ಕಾರ್ಯ ಗಳ ಕುರಿತು ಯೆನ್ ರ್ ಎಂ ಲ್ ಅಧಿಕಾರಿಗಳಾದ ಸಂಗಮೇಶ್ ಅವರು ವಿವರಿಸಿದರು. ವಿವಿಧ ಪ್ರಾತ್ಯಾಕ್ಷಿಕ ತಾಲೂಕು ಗಳಲ್ಲಿ ಮಹಿಳೆಯರಿಗೆ ಮಾಹಿತಿ ನೀಡಲಾಯಿತು. ಕ್ಷೇತ್ರ ವ್ಯವಸ್ತಾಪಕರು ಎಂ.ಸಿ ಪಾಟೀಲ್ ಎರೆ ಗೊಬ್ಬರ, ಎರೆ ಜಲ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ಕಾರ್ಯದಲ್ಲಿ ನಿರತ ಮಹಿಳೆಯರಿಗೆ ಸನ್ಮಾಸಲಾಯಿತು.