ಕಲಬುರಗಿ | ಗುಂಡಗುರ್ತಿಯ ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
Update: 2025-06-05 21:16 IST
ಕಲಬುರಗಿ: ಚಿತ್ತಾಪೂರ ತಾಲೂಕಿನ ಗುಂಡಗುರ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆ ಹಾಗೂ ನೆಮ್ಮದಿ ಕೇಂದ್ರದ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಗುಂಡಗುರ್ತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಪುರ್ಣಾ ಶ್ರೀನಿವಾಸ ಬಣ್ಣಕ್ಕಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಜೀತೆಂದ್ರ ಪಲಂಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳು, ಸಹ ಶಿಕ್ಷಕರು ಮತ್ತು ಉರ್ದು ಶಾಲೆ ಮುಖ್ಯ ಗುರುಗಳು, ಸಹ ಶಿಕ್ಷಕರು, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಕೆ ಮಠಪತಿ, ಈರಣ್ಣಾ ದಂಡೋತಿ, ಆಸೀಫ ಮೋಜನ, ಗ್ರಾಮದ ಮುಖಂಡರಾದ ಕಲ್ಯಾಣಿ ಹಡಪದ, ಸೇರಿದಂತೆ ಇತರರು ಇದ್ದರು.