×
Ad

ಕಲಬುರಗಿ | ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘದ ಕಚೇರಿಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ

Update: 2025-05-02 16:05 IST

ಕಲಬುರಗಿ : ನಗರದಲ್ಲಿರುವ ಕರ್ನಾಟಕ ರಾಜ್ಯ ರೈತ ಕಾರ್ಮಿಕ ಸಂಘ ಹಾಗು ಕಲಬುರಗಿ ಮಹಾನಗರ ಪಾಲಿಕೆ ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘದ ಕಚೇರಿಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು

ಈ ವೇಳೆ ಮಾತನಾಡಿದ ಭಾರತ ರಾಷ್ಟ್ರೀಯ ಲೇಬರ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ ನ ಜಿಲ್ಲಾ ಕಾರ್ಯದರ್ಶಿ ಚಂದು ಜಾಧವ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ದೇಶದ ಕಾರ್ಮಿಕರು ಇಂದು ಹಿಂದಿಗಿಂತಲೂ ಅತೀ ಹೆಚ್ಚು ಅಸುರಕ್ಷತೆ, ಅಭದ್ರತೆ, ಸಾಮಾಜಿಕ ಸೌಲಭ್ಯಗಳು ಇಲ್ಲದೆ ದುಡಿಯುತ್ತಿದ್ದಾರೆ. ಆಳುವ ಸರ್ಕಾರಗಳು ಬಂಡವಾಳಶಾಹಿ, ಕಂಪನಿಗಳ ಮಾಲಕರ ಪರವಾದ ನೀತಿಗಳು ಮತ್ತು ಬೆಂಬಲ ಕೊಡುತ್ತಿರುವುದರಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಸುನೀಲ ಮಾರುತಿ ಮಾನಪಡೆ ಮಾತನಾಡಿದರು.

ಶಾಂತಪ್ಪ ಪಾಟೀಲ ಸಣ್ಣೂರ ಅರವಿಂದ ಚವ್ಹಾಣರವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಅನಿಲ ಮಂಗಾ, ಮೈಲಾರಿ ದೊಡ್ಡಮನಿ , ಅಮೃತ್ ಹೂಗಾರ, ಗುರುಸಿದ್ಧ ಪೂಜಾರಿ, ಸಾಮೀರ್ ಪಾಶ್, ಶಿವಕುಮಾರ್ ,ಮಲ್ಲಿನಾಥ, ಈಶ್ವರ ಸೇರಿದಂತೆ ಇತರರು ಇದ್ದರು. ಕಲ್ಯಾಣಕುಮಾರ ಸಾಗರ ನಿರೂಪಿಸಿದರು, ನಾರಾಯಣ ರಂಗದಾಳ್ ಸ್ವಾಗತಿಸಿದರು. ನಾಗರಾಜ್ ಹೋಗಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News