×
Ad

ಕಲಬುರಗಿ | ಯೋಗದಿಂದ ಸರ್ವ ರೋಗವು ದೂರವಾಗುತ್ತದೆ : ಶಾಸಕ ಡಾ.ಅಜಯಸಿಂಗ್

Update: 2025-06-21 20:00 IST

ಕಲಬುರಗಿ : ಯೋಗದಿಂದ ಸರ್ವ ರೋಗವು ದೂರವಾಗುತ್ತದೆ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಯೋಗ ಮಾಡಬೇಕು. ನಿಮ್ಮ ದೇಹದ ಸಮೋತಲನಕ್ಕೆ ಹಾಗೂ ಆರೋಗ್ಯಕ್ಕೆ ಯೋಗ ಅವಶ್ಯ. ಯೋಗದಿಂದ ರೋಗ ಮುಕ್ತಿಯಾಗುತ್ತದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಅಭಿಮತಪಟ್ಟರು.

ಜೇವರ್ಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಹಾಗೂ ಪತಂಜಲಿ ಯೋಗ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ.ಅಜಯಸಿಂಗ್ ಅವರು ಸಸಿಗೆ ನೀರು ಉಣ್ಣಿಸುವುದರ ಮೂಲಕ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಧಿಕಾರಿ ಶಂಭುಲಿಂಗ ದೇಸಾಯಿ, ಅಧಿಕಾರಿಗಳಾದ ಸಂಗಣ್ಣಗೌಡ, ನಾಗಮುರ್ತಿ ಶಿಲವಂತ, ರವಿಚಂದ್ರ ರೆಡ್ಡಿ, ಶೋಭಾ ಸಜ್ಜನ್, ತಜಮುಲ್ ಸುಮಂಗಲಾದೇವಿ ಹೂಗಾರ, ಸಿ ಪಿ ಐ ರಾಜೇಸಾಹೇಬ್ ನದಾಫ್, ಪಿ ಎಸ್ ಐ ಗಜಾನನ ಬಿರಾದಾರ, ರಾಜಶೇಖರ್ ಸಾಹು ಸಿರಿ, ಚಂದ್ರಶೇಕರ ಹರನಾಳ, ರುಕುಂ ಪಟೇಲ್ ಇಜೇರಿ, ಕಾಶೀರಾಯ ಗೌಡ ಯಲಗೋಡ, ವಿಜಯ ಹಿರೇಮಠ, ಸಂಗಮೇಶ ಕೊಂಬಿನ್, ಖಾಶಿಂಪಟೇಲ್ ಮುದವಾಳ, ಶಿವು ಕಲ್ಲಾ, ಶರಣು ಗುತ್ತೆದಾರ, ಗುರುರಾಜ್ ಸುಭೇಧಾರ, ದಾನಪ್ಪ ಗೌಡ ಹಳಿಮನಿ, ಡಾ. ಪಿ ಎಂ ಮಠ, ಅಶೋಕ್ ಜಾಲವಾದಿ, ರಿಯಾಜ್ ಪಟೇಲ್ ಮುದ್ಬಾಳ, ಬಸವರಾಜ ಬಾಗೇವಾಡಿ, ಮರೆಪ್ಪ ಸರಡಗಿ, ಬಸಣ್ಣ ಸರಕಾರ, ಭೀಮು ಖಾದ್ಯಾಪುರ ಪ್ರಕಾಶ ಮಾರಡಗಿ, ದೇವಿಂದ್ರ ಬಡಿಗೇರ, ಸೇರಿದಂತೆ ವಿದ್ಯಾರ್ಥಿಗಳು, ಮಹಿಳೆಯರು, ತಾಲೂಕ ಆಡಳಿತದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News