×
Ad

ಕಲಬುರಗಿ | ಭಾರತೀಯ ವಿದ್ಯಾ ಕೇಂದ್ರದಲ್ಲಿ ಯೋಗ ದಿನಾಚರಣೆ

Update: 2025-06-21 22:25 IST

ಕಲಬುರಗಿ: ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಕೇಂದ್ರ ಸಿರನೂರ ಕಲಬುರಗಿ ಕನ್ನಡ ಮಾಧ್ಯಮ ಬಾಲಕರ ವಸತಿ ಶಾಲೆಯಲ್ಲಿ ವಿಶೇಷವಾಗಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಯೋಗ ಮಾಡಿ ರೋಗ ಓಡಿಸಿ, ಆರೋಗ್ಯವನ್ನು ಕಾಪಾಡಿ ಎನ್ನುವ ಗೀತೆಯನ್ನು ಅಕ್ಷತಾ ಹಾಗೂ ಮನಿಷಿನಿ ತಂಡದವರು ಸುಶ್ರಾವ್ಯವಾಗಿ ಹಾಡಿದರು

ಪ್ರಾಣಾಯಾಮ, ಪದ್ಮಾಸನ, ವಜ್ರಾಸನ ಮಕ್ಕಳ ಏಕಾಗ್ರತೆ ಹೆಚ್ಚಿಸುವ ಆಸನಗಳು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರುಣ್ ಕುಮಾರ್ ಅವರು ತಿಳಿಸಿದರು.

ಶಾಲಾ ಮೈದಾನದಲ್ಲಿ ಚಿತ್ರಕಲಾ ಶಿಕ್ಷಕರಾದ ಶೇಖಪ್ಪ ಸಿಳ್ಳಿನ್ ಅವರಿಂದ ಬಣ್ಣದಲ್ಲಿ ಸುಂದರವಾದ ಸೂರ್ಯೋದಯದ ಚಿತ್ರ ಬಿಡಿಸಿದ್ದು, ನೋಡಲು ಆಕರ್ಷಕವಾಗಿದ್ದು 800ಕ್ಕೂ ಹೆಚ್ಚು ಮಕ್ಕಳನ್ನು ಅಕ್ಷರಗಳ ಮೇಲೆ ನಿಲ್ಲಿಸಿ ವಿವಿಧ ರೀತಿಯ ಯೋಗಾಸನದಲ್ಲಿನ ಪದ್ಮಾಸನ ,ತಾಡಾಸನ, ಭಂಗಿಗಳನ್ನು ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು, ಪಾಲಕರು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News