ಕಲಬುರಗಿ | ಕನ್ನಡ ಭಾಷೆಯಿಂದ ಏನನ್ನು ಬೇಕಾದರೂ ಸಾಧನೆ ಮಾಡಬಹುದು : ಬಾಬುರಾವ್ ಸೇರಿಕಾರ್
ಕಲಬುರಗಿ : ಕನ್ನಡ ಭಾಷೆಯಿಂದ ನಾವು ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಕನ್ನಡ ಭಾಷೆಯ ಪ್ರಭುತ್ವ ಹೊಂದಿರಬೇಕು ಎಂದು ಉಪನ್ಯಾಸಕ ಬಾಬುರಾವ್ ಸೇರಿಕಾರ್ ಹೇಳಿದ್ದಾರೆ.
ನಗರದ ಕೆವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯದಿಂದ ಹತ್ತನೆಯ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಪಿ ಕಾಲೇಜಿನ ಕಾರ್ಯದರ್ಶಿಗಳಾದ ಕಲ್ಯಾಣಕುಮಾರ್ ಶೀಲವಂತ ವಹಿಸಿದ್ದರು. ಪ್ರಾಸ್ತಾವಿಕವಾಗಿ ಉತ್ತರ ವಲಯದ ಕಸಾಪ ಅಧ್ಯಕ್ಷರಾದ ಪ್ರಭು ಲಿಂಗ ಮೂಲಗೆ ಮಾತನಾಡಿದರು.
ಅತಿಥಿಗಳಾಗಿ ಶರಣಬಸಪ್ಪ ನರೋಣಿ ಹಾಗೂ ಚಂದ್ರಕಾಂತ್ ಬಿರಾದಾರ್ ಮಾತನಾಡಿದರು. ಗುರೂಜಿ ಡಿಗ್ರಿ ಕಾಲೇಜಿನ ಪ್ರಾಚಾರ್ಯರು ಉಪಸ್ಥಿತಿ ಇದ್ದರು. ಕಾರ್ಯಕ್ರಮವನ್ನು ಕೆ.ಬಸವರಾಜ್ ನಿರೂಪಿಸಿದರು. ಸಂಜೀವ್ ಕುಮಾರ್ ಪಾಟೀಲ್ ಸ್ವಾಗತಿಸಿದರು.
ಕಾರ್ಯದರ್ಶಿಗಳಾದ ನಾಗೇಶ್ ತಿಮ್ಮಾಜಿ ವಂದಿಸಿದರು. ಹಣಮಂತ ದಿಂಡುರೆ, ಶಿವಯೋಗಪ್ಪ ಬಿರಾದಾರ್, ರವಿಕುಮಾರ್ ಬಿರಾಜದಾರ, ನವಾಬ್ ಖಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.