ಕಲಬುರಗಿ | ಕಾಂಗ್ರೆಸ್ ಯಂಗ್ ಬ್ರಿಗೇಡ್ ಸೇವಾದಳದ ಸಭೆ
Update: 2025-05-18 23:29 IST
ಕಲಬುರಗಿ : ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವ ಹಿನ್ನೆಲೆಯಲ್ಲಿ ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯ ಅಧ್ಯಕ್ಷರಾದ ಜುನೈದ್ ಪಿ.ಕೆ. ಅವರ ನೇತೃತ್ವದಲ್ಲಿ ಸಭೆ ಜರುಗಿತು.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯ, ಜಿಲ್ಲಾ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರೊಂದಿಗೆ ಸಭೆಯನ್ನು ಉದ್ಘಾಟಿಸಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ, ಕಲಬುರಗಿ ಮುಖಂಡ ವಿಕ್ರಮ್ ಪೊಡಮಲ್, ಮಂಜುನಾಥ ಲೇವಡಿ, ಯಾದಗಿರಿಯ ಸಿದ್ದಯ್ಯ ಎಂ ಯಾಳಗಿ, ಬೀದರ್ ಸಂಗಮೇಶ ಮುಲಗಿ, ಉಮೇಶ್ ಚೌಹಾಣ ಸೇರಿದಂತೆ ಹಲವರು ಇದ್ದರು.