ಕಲಬುರಗಿ: ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ಯುವಕನ ಭೀಕರ ಹತ್ಯೆ
Update: 2025-03-04 11:00 IST
ವೀರೇಶ್ ಬಿರಾದರ್
ಕಲಬುರಗಿ: ಬೆಳ್ಳಂಬೆಳಗ್ಗೆ ಯುವಕನೋರ್ವನನ್ನು ಕಬ್ಬಿಣದ ಸಲಾಕೆಯಿಂದ ತೀವ್ರ ಹಲ್ಲೆ ನಡೆಸಿ, ಭೀಕರ ಹತ್ಯೆ ಮಾಡಿರುವ ಘಟನೆ ನಗರದ ಕಾಕಡೆ ಚೌಕ್ ಸಮೀಪದ ಲಂಗರ್ ಹನುಮಾನ್ ದೇವಸ್ಥಾನದ ಹತ್ತಿರ ನಡೆದಿದೆ.
ಇಲ್ಲಿನ ಫಿಲ್ಟರ್ ಬೆಡ್ ಪ್ರದೇಶದ ಭವಾನಿ ನಗರದ ವೀರೇಶ್ ಅಲಿಯಾಸ್ ಸಾರಥಿ ಬಿರಾದರ್ (30) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ, ಡಿಸಿಪಿ ಕನಿಕಾ ಸಿಕ್ರಿವಾಲ್ ಸೇರಿದಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಸಿಬ್ಬಂದಿಯವರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.