×
Ad

ಕಲಬುರಗಿ | ಯುವಜನರು ಸ್ವಹಿತಕ್ಕಿಂತ ದೇಶದ ಹಿತಕ್ಕಾಗಿ ದುಡಿಯಬೇಕು : ಡಾ.ಬಿ.ಎಚ್.ನಿರಗುಡಿ

Update: 2025-10-31 18:53 IST

ಕಲಬುರಗಿ: ದೇಶದ ಯುವ ಜನರು ದೇಶವನ್ನು ಸದೃಢವಾಗಿ ಬೆಳೆಸಲು ಜಾತಿ ಧರ್ಮದ ಸೀಮಿತ ಚೌಕಟ್ಟನ್ನು ಮೀರಿ ದೇಶದ ಉನ್ನತಿಗೆ ಶ್ರಮಿಸಬೇಕು. ಅಂದಾಗ ಮಾತ್ರ ದೇಶ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ.ಬಿ.ಎಚ್.ನಿರಗುಡಿ ಅವರು ಅಭಿಪ್ರಾಯ ಪಟ್ಟರು.

ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರ ಕಲಬುರಗಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 135ನೇ ಜಯಂತಿ ಹಾಗೂ ಏಕತಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಡಾ.ಬಿ.ಎಚ್.ನಿರಗುಡಿ ಅವರು, ದೇಶದ ಯುವ ಜನರು ಸ್ವಹಿತಕ್ಕಿಂತ ದೇಶದ ಹಿತಕ್ಕಾಗಿ ದುಡಿಯಬೇಕೆಂದು ಕರೆಕೊಟ್ಟರು.

ವಿಶೇಷ ಆಹ್ವಾನಿತರಾದ ದೇವಿಂದ್ರ ನಾಡಗೇರಿ, ಉಪ ತಹಶೀಲ್ದಾರರು, ಪಶು ವೈದ್ಯರಾದ ನಾಗಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರೊ.ಸಿದ್ದಪ್ಪ ಎಂ.ಕಾಂತ ಅವರು ವಿದ್ಯಾರ್ಥಿಗಳಲ್ಲಿ ದೇಶದ ಬಗ್ಗೆ ಇರಬೇಕಾದ ಅಭಿಮಾನದ ಬಗ್ಗೆ ಗಮನ ಸೆಳೆದರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಡಾ.ಸಿದ್ದಾರ್ಥ ಮದನಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಹಿರಿಯ ಪ್ರಾಧ್ಯಾಪಕರಾದ ಡಾ.ನಿರ್ಮಲ ಸಿರಗಾಪುರ, ಡಾ.ಗಾಂಧೀಜಿ ಮೊಳಕೇರಿ, ಡಾ.ಹರ್ಷವರ್ಧನ್, ಡಾ.ಅರುಣ್ ಜೊಳದಕೂಡ್ಲಿಗಿ, ಡಾ.ಸುದರ್ಶನ ಮದನಕರ, ಡಾ.ಅರುಣ್ ಕುಮಾರ್, ಪಂಡಿತ್, ಕೌಶಲ್ಯ, ಡಾ.ಬಸವರಾಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಡಾ.ವಸಂತ ವಿ.ನಾಶಿ ಅವರು ನಿರೂಪಿಸಿದರು. ಹಿಂದಿ ವಿಭಾಗದ ಡಾ.ಶಿವಕುಮಾರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News