×
Ad

ಕಾಳಗಿ | 14 ವರ್ಷ ಸೇವೆಗೈದ ಶಿಕ್ಷಕನಿಗೆ ಬೀಳ್ಕೊಡುಗೆ ಕಾರ್ಯಕ್ರಮ

Update: 2026-06-13 17:01 IST

ಕಾಳಗಿ: ಹಲವು ವರ್ಷಗಳಿಂದ ಸುಂಠಾಣ ಬಡಾ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ವರ್ಗಾವಣೆಗೊಂಡ ಪ್ರಭಾರಿ ಮುಖ್ಯ ಶಿಕ್ಷಕ ಹಣಮಂತ ಖೋಡಳ್ಳಿ ಅವರಿಗೆ ತಾಂಡದ ಜನರು, ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾವಪೂರ್ಣ ಸನ್ಮಾನ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.

ತಾಲೂಕಿನ ಸುಂಠಾಣ ಬಡಾ ತಾಂಡದ ಸರ್ಕಾರಿ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭವು ಹಬ್ಬದ ಸಂಭ್ರಮವನ್ನು ಮೂಡಿಸಿತು. ಕಳೆದ 14 ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಾಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಹಣಮಂತ ಖೋಡಳ್ಳಿ ಅವರ ಸೇವೆಯನ್ನು ತಾಂಡದ ಜನರು ಸ್ಮರಿಸಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರೇಮಕುಮಾರ, ಶಿಕ್ಷಕ ಹಣಮಂತ ಖೋಡಳ್ಳಿ ಅವರು ಕೇವಲ ಪಾಠ ಬೋಧನೆಗೆ ಸೀಮಿತವಾಗದೆ ಶಾಲೆಯನ್ನು ಮಾದರಿ ಶಿಕ್ಷಣ ಕೇಂದ್ರವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದು, ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಮತ್ತು ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಸಿದ್ದಾರೆ ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಣಮಂತ ಖೋಡಳ್ಳಿ, ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿಗಳಿಗಿಂತ ತಾಂಡದ ಜನರು ಹಾಗೂ ಹಳೆ ವಿದ್ಯಾರ್ಥಿಗಳು ತೋರಿದ ಈ ಪ್ರೀತಿ ಮತ್ತು ಗೌರವ ನನಗೆ ಅತ್ಯಂತ ಅಮೂಲ್ಯವಾಗಿದೆ. ಶಾಲೆಯ ಅಭಿವೃದ್ಧಿಗೆ ತಾಂಡದ ಜನರು ಸದಾ ಸಹಕಾರ ನೀಡಿದ್ದು, ಮುಂದೆಯೂ ಶಾಲೆಯ ಪ್ರಗತಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನೀಲಕುಮಾರ ಗುತ್ತೇದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಕಲಮೂಡ, ಪ್ರಧಾನ ಕಾರ್ಯದರ್ಶಿ ಬಸಂತರಾಯ ಪೆದ್ದಿ, ರಾಜ್ಯ ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷ ಜಗನ್ನಾಥ ಬಂಡಿ, ಮುಖ್ಯಗುರು ಅಶೋಕ ಹೊಸಮನಿ ಹಾಗೂ ಹಣಮಂತ ಮಂತೆಟ್ಟಿ ಸೇರಿದಂತೆ ಹಲವರು ಮಾತನಾಡಿ ಶಿಕ್ಷಕರ ಸೇವೆಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪಿತಾಂಬರ ಮಡಿವಾಳ, ರಾಮಕೃಷ್ಣ ಮುಚ್ಚಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ರಾಮದಾಸ ರಾಠೋಡ, ಮುಖ್ಯಗುರು ಹಣಮಂತ ಸಿನ್ನೂರ, ಲಕ್ಷ್ಮೀ ಸಂತೋಷ ಚಿನ್ನ ರಾಠೋಡ, ಮಲ್ಲಪ್ಪ ಚಿಂತಕೊಟಿ, ಪ್ರೇಮ ಯಲಮಡಗಿ, ಸಂಜುಕುಮಾರ ಕೋಡ್ಲಿ, ರಮೇಶ ನಲಾವಡೆ, ಗಂಗಾಧರ ಯೋಗಿ, ಶಾಂತಕುಮಾರ ಎಕಮಾಯಿ, ಧರ್ಮಣ್ಣ ನಾವದಗಿ, ಸಂಜುಕುಮಾರ ರಾಠೋಡ, ಪಾಂಡು ನಾಯಕ, ತಾರಚಂದ ಕಾರಬಾರಿ, ಗೋಪಾಲ ದೇವ ಸೇರಿದಂತೆ ಅನೇಕ ಗಣ್ಯರು, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕ ನಾಗರಾಜ ಮಡಿವಾಳ ಗೋಟೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News