ಆಳಂದ | ಸೈಬರ್ ಸಂಟರ್‌ನಲ್ಲಿ ಅಗ್ನಿಅವಘಡ; ಹಲವು ಉಪಕರಣಗಳು ಬೆಂಕಿಗಾಹುತಿ
Update: 2025-07-24 13:09 IST
ಕಲಬುರಗಿ : ಸೈಬರ್ ಸೆಂಟರ್‌ವೊಂದಕ್ಕೆ ಬೆಂಕಿ ತಗುಲಿ ಕಂಪ್ಯೂಟರ್ ಸಹಿತ ಹಲವು ಉಪಕರಣಗಳು ಹಾನಿಗೊಳಗಾದ ಘಟನೆ ಆಳಂದ ಪಟ್ಟಣದ ಹೊರವಲಯದಲ್ಲಿರುವ ಮಿನಿವಿಧಾನಸೌಧ ಆವರಣದಲ್ಲಿ ನಡೆದಿದೆ.
ಅಂಬರೀಶ್ ದೇವನೂರ ಮಾಲೀಕತ್ವದ ವೈಷ್ಣವಿ ಆನ್‌ಲೈನ್ ಸೆಂಟರ್‌ಗೆ ಬೆಂಕಿ ತಗುಲಿದ್ದರಿಂದ ಹಾನಿಯಾಗಿದೆ. ಬೆಂಕಿ ತೀವ್ರಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿಯಿಂದ ಲ್ಯಾಮಿನೇಷನ್ ಮಷೀನ್, ಎರಡು ಕಂಪ್ಯೂಟರ್‌ಗಳು, ಜೆರಾಕ್ಸ್ ಮಷೀನ್, ಪ್ರಿಂಟರ್, ಜನರೇಟರ್ ಬ್ಯಾಟರಿ ಹಾಗೂ ಟೇಬಲ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಸೈಬರ್ ಸೆಂಟರ್ ಮಾಲೀಕ ಅಂಬರೀಶ್ ದೇವನೂರ ಅವರು ಈ ಕುರಿತು ಮಾಹಿತಿ ನೀಡಿದ್ದು, ಒಟ್ಟು 3 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.