×
Ad

ಕಲಬುರಗಿ ಜಿಲ್ಲೆಯ ಸಂಘ-ಸಂಸ್ಥೆಗಳು ಫೈಲಿಂಗ್ ಅರ್ಜಿ ಸಲ್ಲಿಸಲು ಡಿ.31 ರವರೆಗೆ ಅವಕಾಶ

Update: 2025-03-21 22:58 IST

ಕಲಬುರಗಿ : ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿ ನೋಂದಾಯಿಸಲ್ಪಟ್ಟ ಸಂಘವು ಪ್ರತಿವರ್ಷ ಕಲಂ 13ರ ಪ್ರಕಾರ ಫೈಲಿಂಗ್ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದಾಗ್ಯೂ ಸಂಘಗಳು ಫೈಲಿಂಗ್‌ ಅರ್ಜಿ ಸಲ್ಲಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ ಎಂದು ಕಲಬುರಗಿ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.

ಕಾರ್ಯನಿರತ ಸಂಘಗಳ ಹಿತದೃಷ್ಟಿಯಿಂದ ಹಾಗೂ ಸಾಮಾಜಿಕ ನ್ಯಾಯದೃಷ್ಟಿಯಿಂದ 5 ವರ್ಷಗಳ ಅವಧಿಯ ನಂತರ ಫೈಲಿಂಗ್‌ ಅರ್ಜಿ ಸಲ್ಲಿಸದೇ ಇರುವ ಸಂಘಗಳಿಗೆ ಪ್ರತಿ ವರ್ಷ 3,000 ರೂ.ಗಳ ದಂಡದೊಂದಿಗೆ ಫೈಲಿಂಗ್‌ ಅರ್ಜಿ ಸಲ್ಲಿಸಲು ಸರ್ಕಾರವು ಡಿ.31 ರವರೆಗೆ ಅವಕಾಶ ನೀಡಿ ಕಲಂ 13ರ ಪ್ರಕಾರ 5 ವರ್ಷಗಳ ಮೇಲ್ಪಟ್ಟು ಫೈಲಿಂಗ್ ಮಾಡದೇ ಇರುವ ಸಂಘ ಸಂಸ್ಥೆಗಳ ಸದಸ್ಯರ ಹಿತದೃಷ್ಟಿಯಿಂದ ಕೆಳಕಂಡ ಷರತ್ತುಗೊಳಪಟ್ಟು ಫೈಲಿಂಗ್ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗಿದೆ.

5 ವರ್ಷಗಳಿಗೂ ಮೇಲ್ಪಟ್ಟು ಫೈಲಿಂಗ್‌ ಮಾಡಿಕೊಳ್ಳದೆ ಬಾಕಿ ಇರುವ ಸಂಘ/ಸಂಸ್ಥೆಗಳು ಪ್ರತಿ ವರ್ಷಕ್ಕೆ 3,000 ರೂ.ಗಳ ಹೆಚ್ಚುವರಿ ದಂಡ ಪಾವತಿಸಿ ಫೈಲಿಂಗ್‌ ಮಾಡಿಕೊಳ್ಳಬೇಕು. ಈ ಅವಕಾಶವು ಡಿ.31ರ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ. ಸಂಘದ ಎಲ್ಲಾ ಅಡಿಟ್ ವರದಿಗಳನ್ನು ಮುದ್ದಾಂ/ಆನ್‍ಲೈನಲ್ಲಿ ಮಾತ್ರ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ಫೈಲಿಂಗ್ ಮಾಡದೇ ಇರುವ ಸಂಘ-ಸಂಘಗಳು ಕಲಂ 13ರ ಪ್ರಕಾರ ನಿಗದಿತ ಅವಧಿಯಲ್ಲಿ ಫೈಲಿಂಗ್‌ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಪಡೆಯಬೇಕು. ನಿಗದಿತ ಅವಧಿಯಲ್ಲಿ ಫೈಲಿಂಗ್ ಮಾಡಿಕೊಳ್ಳದೇ ಬಾಕಿ ಇರುವ ಸಂಘ-ಸಂಸ್ಥೆಗಳನ್ನು ಜಿಲ್ಲೆಯ ಸಂಘಗಳ ನೋಂದಣಾಧಿಕಾರಿಗಳು ಅಧಿಕಾರವನ್ನು ಉಪಯೋಗಿಸಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಕಲಂ 27 ರ ಪ್ರಕಾರ ರದ್ದುಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News