ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭ; ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಭಾಗಿ
ಕಲಬುರಗಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಬಿಡುಗಡೆ ಸಮಾರಂಭದಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಪಾಲ್ಗೊಂಡರು.
ನ.16ರಂದು ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್ನ ಕಮಲ್ ಮಹಲ್ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಅವರು, ಸೋನಿಯಾ ಗಾಂಧಿ ಅವರ ಜೀವನಾನುಭವ, ವೈಯಕ್ತಿಕ ಪಯಣ ಹಾಗೂ ಆಲೋಚನೆಗಳನ್ನು ಒಳಗೊಂಡ ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿಯು ಕುಟುಂಬ, ಅಸ್ಮಿತೆ, ಸಂಬಂಧಗಳು ಹಾಗೂ ಭಾರತ ಮತ್ತು ಭಾರತೀಯ ಜನರೊಂದಿಗಿನ ಅವಿನಾಭಾವ ಸಂಬಂಧವನ್ನು ಆಪ್ತವಾಗಿ ಕಟ್ಟಿಕೊಡುವ ಹೃದಯಸ್ಪರ್ಶಿ ನಿರೂಪಣೆಯಾಗಿದೆ ಎಂದು ಬಣ್ಣಿಸಿದರು.
ತಮ್ಮ ಬದುಕಿನ ಹಲವು ಮಜಲುಗಳು ಮತ್ತು ಅನುಭವಗಳನ್ನು ಸೋನಿಯಾ ಗಾಂಧಿ ಅವರು ಪ್ರಾಮಾಣಿಕತೆ ಹಾಗೂ ಆತ್ಮೀಯತೆಯಿಂದ ಓದುಗರ ಮುಂದಿಟ್ಟಿರುವುದು ಶ್ಲಾಘನೀಯ. ಸಾಹಿತ್ಯ ಕ್ಷೇತ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡಿರುವ ಅವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ತಿಳಿಸಿದ್ದಾರೆ.