×
Ad

ಯುಗಾದಿ, ರಮಝಾನ್ ಹಬ್ಬದ ಅಂಗವಾಗಿ ಕಲಬುರಗಿ-ಬೆಂಗಳೂರು ನಡುವೆ ವಿಶೇಷ ರೈಲು

Update: 2025-03-25 12:51 IST

ಸಾಂದರ್ಭಿಕ ಚಿತ್ರ

ಕಲಬುರಗಿ : ಯುಗಾದಿ ಮತ್ತು ರಮಝಾನ್ ಹಬ್ಬಗಳ ಅಂಗವಾಗಿ ಕಲಬುರಗಿ-ಬೆಂಗಳೂರು ನಡುವೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯುಗಾದಿ ಮತ್ತು ರಮಝಾನ್ ಹಬ್ಬಗಳ ಸಮಯದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪ್ರಯಾಣಿಕರ ಬೇಡಿಕೆಯ ಮೇರೆಗೆ 2 ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲಿದೆ.

ಕಲಬುರಗಿ-SMVT ಬೆಂಗಳೂರು ವಿಶೇಷ ರೈಲುಗಳು (2 ಟ್ರಿಪ್‌ ಗಳು)

1. SMVT ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 7:40ಕ್ಕೆ ಕಲಬುರಗಿಗೆ ಆಗಮಿಸಲಿದೆ.

2. ರೈಲು ಸಂಖ್ಯೆ 06520 ವಿಶೇಷ ರೈಲು ದಿನಾಂಕ ಮಾ.29 (ಶನಿವಾರ) ರಂದು ಬೆಳಿಗ್ಗೆ 9:35 ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನ ರಾತ್ರಿ 20:00 ಕ್ಕೆ SMVT ಬೆಂಗಳೂರಿಗೆ ಆಗಮಿಸಲಿದೆ.

ನಿಲುಗಡೆಗಳು : ಶಹಾಬಾದ್, ಯಾದಗೀರ್, ಕೃಷ್ಣ, ರಾಯಚೂರು, ಮಂಥ್ರಾಲಯಂ ರಸ್ತೆ, ಅದೋನಿ, ಗುಂಟಕಲ್, ಅನಂತಪುರ, ಧರ್ಮಾವರಂ ಮತ್ತು ಯಲಹಂಕ.

ಸಂಯೋಜನೆ :

1 AC-II ಶ್ರೇಣಿ, 1 AC-III ಶ್ರೇಣಿ, 11 ಸ್ಲೀಪರ್ ವರ್ಗ, 4 ಸಾಮಾನ್ಯ ಎರಡನೇ ದರ್ಜೆ ಮತ್ತು 2 ಲಗೇಜ್ ಕಮ್ ಗಾರ್ಡ್ನ ಬ್ರೇಕ್ ವ್ಯಾನ್ಗಳು (19 ಬೋಗಿಗಳು) ಹೊಂದಿರುತ್ತದೆ.

ವಿಶೇಷ ರೈಲು ಸಂಖ್ಯೆ 06520/06519 ಗಾಗಿ ಬುಕಿಂಗ್ ಗಳು ಎಲ್ಲಾ ಗಣಕೀಕೃತ ಕೇಂದ್ರಗಳಲ್ಲಿ ಮತ್ತು ವೆಬ್ಸೈಟ್ www.irctc.co.in ನಲ್ಲಿ ವಿಶೇಷ ಶುಲ್ಕದಲ್ಲಿ ಲಭ್ಯವಿರುತ್ತವೆ

ಈ ವಿಶೇಷ ರೈಲುಗಳ ವಿವರವಾದ ಸಮಯ ಮತ್ತು ನಿಲುಗಡೆಗಳಿಗಾಗಿ, ದಯವಿಟ್ಟು www.enquiry.indianrail.gov.in ಗೆ ಭೇಟಿ ನೀಡಿ ಅಥವಾ NTES ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News