×
Ad

ಸರಕಾರಿ ಜಾಗ ಅತಿಕ್ರಮಿಸಿದರ ದಾಖಲೆ ಒಪ್ಪಿಸಿದರೆ ಕಠಿಣ ಕ್ರಮ: ಶಾಸಕ ಬಸವರಾಜ ಮತ್ತಿಮಡು

Update: 2025-09-08 23:36 IST

ಕಲಬುರಗಿ: ಸರಕಾರಿ ಜಾಗಗಳನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪ ಮಾಡುವ ಬದಲು ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಒಪ್ಪಿಸಿದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಸೋಮವಾರ ಶಹಾಬಾದ್‌ ನಗರಸಭೆಯ ಸಭಾಂಗಣದಲ್ಲಿ ಆಯೋಜಿಸಲಾದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದ ಸರಕಾರಿ ಜಾಗವನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅದರಂತೆ ನಮಗೂ ನೀಡಿ ಎಂದು ಮತ್ತೊಂದು ಜಾಗ ಅತಿಕ್ರಮಣಕ್ಕೆ ಒಳಗಾಗುವುದು ನಿಲ್ಲಬೇಕು. ಇದೇ ರೀತಿ ಮುಂದುವರೆದರೆ ಸರಕಾರಿ ಜಾಗ ಉಳಿಯುವುದಿಲ್ಲ. ಆದ್ದರಿಂದ ಸೂಕ್ತ ದಾಖಲೆ ಒಪ್ಪಿಸಿ ಕಠಿಣ ಕ್ರಮ ಕೈಗೊಂಡು ಸರಕಾರಿ ಜಾಗವನ್ನು ತೆರವುಗೊಳಿಸಲಾಗುವುದೆಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.

ನಗರಸಭೆಯ ಸದಸ್ಯರಾದ ನಾಗರಾಜ ಕರಣಿಕ್, ರವಿ ರಾಠೋಡ, ಸಲೀಮಾ ಬೇಗಂ ಮಾತನಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ನೀಲಪ್ರಭಾ ಬಬಲಾದ, ನಗರಸಭೆಯ ಅಧ್ಯಕ್ಷೆ ಚಂಪಾಬಾಯಿ ಮೇಸ್ತ್ರಿ, ಉಪಾಧ್ಯಕ್ಷೆ ಫಾತಿಮಾ ಬಾಕ್ರೋದ್ದಿನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪೀರಮ್ಮ ಪಗಲಾಪೂರ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News