×
Ad

ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಬೇಕು: ಕಲಬುರಗಿ ಡಿಸಿ ಬಿ.ಫೌಜಿಯಾ ತರನ್ನುಮ್

Update: 2025-10-28 20:23 IST

ಕಲಬುರಗಿ: ನಮ್ಮ ಭಾರತ ದೇಶವು ವಿವಿಧತೆಯಲ್ಲಿ ಏಕತೆಯಿಂದ ಕೂಡಿದ್ದು ಇಲ್ಲಿ ಕಲೆ, ಸಾಹಿತ್ಯ. ಆಚಾರ ವಿಚಾರಗಳು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಹಾಗೂ ವಿದ್ಯಾರ್ಥಿಗಳು ಪಠ್ಯದ ಕಲಿಕೆಗೆ ಮಾತ್ರ ಸೀಮಿತವಾಗದೆ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್‍ ಅವರು ಹೇಳಿದರು.

ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇರಾಯುವ ಭಾರತ್,ಎನ್.ಎಸ್.ಎಸ್. ಘಟಕ ಹಾಗೂ ಸರಕಾರಿ ಮಹಾವಿದ್ಯಾಲಯ( ಸ್ವಾಯತ್ ) ಜಿಲ್ಲಾ ವಿಜಾನಕೇಂದ್ರ ಮತ್ತು ಜಿಲ್ಲಾ ಯುವಕ ಯುವತಿಯರ ಸಂಘಗಳು ಕಲಬುರಗಿ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಮೊಬೈಲ್‍ನಲ್ಲಿ ಕಳೆಯದೆ ನಮ್ಮ ದೇಶದ ಸಂಸ್ಕೃತಿ ಕಲೆ ಆಚಾರ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿ. ತಾವುಗಳು ಕಲಿತ ವಿದ್ಯಾ ಸಂಸ್ಥೆಗಳ ಗುರುಗಳು ನಿಮ್ಮ ತಂದೆ ತಾಯಿಗಳು ಹೆಮ್ಮೆ ಪಡುವಂತೆ ಮಹಾನ್ ಸಾಧನೆಯನ್ನು ಮಾಡಬೇಕು ಎಂದು ಹೇಳಿದರು.

ಸರಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ಇಂತಹ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮನಸ್ಸುಗಳನ್ನು ಜೋಡಿಸುವ ಕೆಲಸವಾಗುತ್ತಿದೆ.

ರಾಜ್ಯ ಮತ್ತು ರಾಷ್ಟ ಪ್ರಶಸ್ತಿ ವಿಜೇತರನ್ನು ಕಾರ್ಯಕ್ರಮಕ್ಕೆ ಸನ್ಮಾನಿಸಿದ ಮುಖ್ಯ ಉದ್ದೇಶ ಅವರು ಮಾಡಿದ ಸಾಧನೆ ನಮ್ಮೆಲ್ಲ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿ ನಮ್ಮ ವಿದ್ಯಾರ್ಥಿಗಳು ಪ್ರತಿಯೊಂದು ರಂಗದಲ್ಲಿಯು ಇನ್ನು ಹೆಚ್ಚಿನ ಸಾಧನೆಯನ್ನು ಮಾಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳಸಿಕೊಳ್ಳಬೇಕು ಸೋಲು ಗೆಲುವಿನ ಸೋಪಾನ ಎಂಬ ಮಾತಿನಂತೆ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಸಾಧನೆ ಮಾಡುವಂತ ವ್ಯಕ್ತಿಗಳಾಗಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರಾದ ಸೋಮಶೇಖರ್ ವೈ ಅತಿಥಿಗಳನ್ನು ಸ್ವಾಗತಿ ಪ್ರಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಪ್ರಶಸ್ತಿ ವಿಜೇತರಾದ ಸುರೇಶ ಬಡಿಗೇರ್, ಬಸವರಾಜತೋಟದ, ವೀರಭದ್ರಪ್ಪ ಸಿಂಪಿ, ಪ್ರಭುಲಿಂಗ, ಸುಭಾಷ ವಗ್ಗನ್, (ರಾಷ್ಟ್ರಪ್ರಶಸ್ತಿ ವಿಜೇತ್) ಪಿ.ಆರ್ ಪಾಂಡು ಅವರಿಗೆ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನವನ್ನು ಮಾಡಲಾಯಿತು.

ಜನಪದ ಸಮೂಹ ನೃತ್ಯ ಪ್ರಥಮ ಸ್ಥಾನ ಪಡೆದ ಲಕ್ಷ್ಮೀ ಮತ್ತುತಂಡಕ್ಕೆ 10,000 ಬಹುಮಾನ ಮತ್ತು ಪ್ರಶಸ್ತಿ ಪತ್ರ ದ್ವಿತೀಯ ಸ್ಥಾನ ಸಂಜು ಮತ್ತು‌ ತಂಡಕ್ಕೆ 7,000 ಬಹುಮಾನ ಮತ್ತು ಪ್ರಶಸ್ತಿ ಪತ್ರ ತೃತೀಯ ಸ್ದಾನ ಗಾಯಿತ್ರಿ ಮತ್ತು ತಂಡಕ್ಕೆ 5000 ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ಜನಪದ ಗೀತೆಗೆ ಪ್ರಥಮ ಸ್ಥಾನ ಷಡಾಕ್ಷರಿ ತಂಡಕ್ಕೆ ಪ್ರಥಮ 10,000 ಬಹುಮಾನ ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಸ್ಥಾನ ಪಡೆದ ಶ್ವೇತ ತಂಡಕ್ಕೆ 7000 ಬಹುಮಾನ ಮತ್ತು ಪ್ರಶಸ್ತಿ ಪತ್ರ, ತೃತೀಯ ಸ್ಥಾನ ಪಡೆದ ಪ್ರತೀಕ್ಷ ಮತ್ತು ತಂಡಕ್ಕೆ 5000 ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯತು.

ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಶ್ರೀಮಂತ ಹೊಳ್ಕರ್, ಯುಜಿ ಕಲಾವಿಭಾಗದ ಡೀನ್ ಡಾ. ವಿಜಯಕುಮಾರ್ ಸಾಲಿಮಾನಿ, ಯುಜಿ ವಿಜಾನ ವಿಭಾಗದ ಡಾ. ದವಲಪ್ಪ, ಮಹಾವಿದ್ಯಾಲಯದ ಎಲ್ಲಾ ವಿಭಾಗದ ಡೀನರುಗಳು ಮತ್ತು ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಸಾಂಸ್ಕೃತಿಕ ಸಂಚಾಲಕರು ಡಾ.ಬಲಭೀಮ ಸಾಂಗ್ಲಿ ಕಾರ್ಯಕ್ರಮ ನಿರೂಪಿಸಿದರು ಸಿಬ್ಬಂದಿ ಕಾರ್ಯದರ್ಶಿ ಡಾ.ರವೀಂದ್ರಕುಮಾರ ಭಂಡಾರಿ ಕಾರ್ಯಕ್ರಮ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News