×
Ad

ಕಲಬುರಗಿ: ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ

Update: 2025-09-20 23:28 IST

ಕಲಬುರಗಿ: ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ (ಕಲಬುರಗಿ ಉತ್ತರ ) ಆಯೋಜಿಸಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ವೇದಿಕೆಯಲ್ಲಿ ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನಮಠದ ಡಾ.ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಮದಾನೆ, ಸಹಾಯಕ ನಿದೇರ್ಶಕ ಚಂದ್ರಕಾಂತ ಕಿಣಗಿ, ಸಂಘದ ಗೌರವ ಅಧ್ಯಕ್ಷ ಅಂಬಾದಾಸ ಪಾಟೀಲ, ತಾಲೂಕ ಅಧ್ಯಕ್ಷ ಶಿವಾನಂದ ಪಾಸೋಡಿ ಮತ್ತಿತರು ಇದ್ದರು.

ಈ ಸಂದರ್ಭದಲ್ಲಿ ಡಾ.ಶಾಂತಾಬಾಯಿ ಬಿರಾದಾರ, ಚಂದ್ರಶೇಖರ ಮಡಿವಾಳ, ಡಾ.ಪ್ರೇಮಸಿಂಗ್ ಚವ್ಹಾಣ, ಡಾ.ನಾಗಭೂಷಣ ವಿ.ಮಹಾಂತಿನ ಮಠ, ರೇವಣಸಿದ್ದಯ್ಯ ವೈದ್ಯ, ಅಶೋಕ ನಾವಿ, ಸೈಯದ್ ಅಹ್ಮದ್ ಅಲಿ, ಶೇಖ ಮುಜಿಬ್, ಎ.ಡಿ.ಭಾಷಾ, ಇಸಾಮುದ್ದಿನ್ ಖಾಜಿ, ಪ್ರಭುಲಿಂಗ ಮೂಲಗೆ, ಕೃಷ್ಣಪ್ಪ ನಾಯಕ ಜಾಹಗೀರದಾರ, ಮಹಾನಂದ ಹುಲಿ, ನಾಗಪ್ಪಾ ಸಾಸಟ್ಟಿ, ಹೇಮಂತಕುಮಾರ ಸರ್ದಾರ, ಶ್ರಶೈಲ ಬೆಳಗುಂಪಿ, ಮುತ್ತಣ್ಣ ಕುಂಬಾರ, ಜೀವನಕುಮಾರ ರಾಠೋಡ, ಸಾಬಿರ ಅಹ್ಮದ್, ದೇವಿಂದ್ರ ಚವ್ಹಾಣ, ಎಮ್.ಡಿ ಶರೀಫ್, ಮಾನಪ್ಪ ನಾಯಕ, ಹಾಜಿ ಶಾ, ನಾದಿರಾ ಬೇಗಂ, ಶಾಂತಾಬಾಯಿ ಮಸೂತಿ ಸೇರಿದಂತೆ ಕಲಬುರಗಿ ಉತ್ತರ ತಾಲೂಕಿನ ಎಲ್ಲಾ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News