×
Ad

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ತಾಲೂಕುವಾರು ಸಹಾಯವಾಣಿ ಸ್ಥಾಪನೆ : ಡಿಸಿ ಫೌಝಿಯಾ ತರನ್ನುಮ್

Update: 2025-03-11 18:28 IST

ಬಿ.ಫೌಝಿಯಾ ತರನ್ನುಮ್

ಕಲಬುರಗಿ : ಮುಂಬರುವ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ವಿಭಾಗ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರರ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಿ, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಕೆಳಕಂಡ ಸಹಾಯವಾಣಿ ಕೇಂದ್ರಗಳು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5.30 ಗಂಟೆಯವರೆಗೆ ಕಾರ್ಯನಿರ್ವಹಿಸಲಿದ್ದು, ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬೇಕೆಂದು ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ (ಆಪ್ತ ಸಹಾಯಕ-ಪ್ರಜ್ವಲ್ ಮೊಬೈಲ್ ಸಂಖ್ಯೆ-9108144415, ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರದ ದೂರವಾಣಿ ಸಂಖ್ಯೆ 08472-278677 ಹಾಗೂ ಮಹಾನಗರ ಪಾಲಿಕೆ ಮತ್ತು ಕಲಬುರಗಿ ನಗರ ಕೆ.ಯು.ಐ.ಡಿ.ಎಫ್.ಸಿ. ಸಂಖ್ಯೆ 18004258247ಗೆ ಸಂಪರ್ಕಿಸಬೇಕು.

ತಾಲೂಕುವಾರು ಸ್ಥಾಪಿಸಿ ಸಹಾಯವಾಣಿ ಸಂಖ್ಯೆ ಹಾಗೂ ತಾಲೂಕುವಾರು ನೇಮಕ ಮಾಡಲಾದ ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ.

ಆಳಂದ ತಹಶೀಲ್ದಾರ್‌ ಕಚೇರಿಯ ಸಹಾಯವಾಣಿ ಸಂಖ್ಯೆ-9448135593 (ನೋಡಲ್ ಅಧಿಕಾರಿ ಅಫಜಲಪೂರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-7760640550), ಅಫಜಲಪೂರ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ 08470-282020 (ನೋಡಲ್ ಅಧಿಕಾರಿ ಆಳಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-9480866100), ಚಿತ್ತಾಪೂರ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ-9448652111 (ನೋಡಲ್ ಅಧಿಕಾರಿ ಚಿಂಚೋಳಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು-9886919172).

ಚಿಂಚೋಳಿ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ-9449437000 (ನೋಡಲ್ ಅಧಿಕಾರಿ ಚಿತ್ತಾಪೂರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-9986564605), ಕಾಳಗಿ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ-9980034461 (ನೋಡಲ್ ಅಧಿಕಾರಿ ಜೇವರ್ಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು-9880882048), ಕಲಬುರಗಿ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ-9731631298 (ನೋಡಲ್ ಅಧಿಕಾರಿ- ಕಲಬುರಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-9900290355) ಹಾಗೂ ಕಮಲಾಪೂರ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ-9986324648 (ನೋಡಲ್ ಅಧಿಕಾರಿ ಸೇಡಂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-8277617666).

ಜೇವರ್ಗಿ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ-7019270898 (ನೋಡಲ್ ಅಧಿಕಾರಿ-ಶಹಾಬಾದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-9448858600), ಯಡ್ರಾಮಿ ತಹಶೀಲ್ದಾರ್‌ ಕಚೇರಿಯ ಸಹಾಯವಾಣಿ ಸಂಖ್ಯೆ-9538559509 (ನೋಡಲ್ ಅಧಿಕಾರಿ ಕಮಲಾಪೂರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-9731089877), ಶಹಾಬಾದ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ-8152093789 (ನೋಡಲ್ ಅಧಿಕಾರಿ ಕಾಳಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-7760881347) ಹಾಗೂ ಸೇಡಂ ತಹಶೀಲ್ದಾರ್‌ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ-8970525804 (ನೋಡಲ್ ಆಧಿಕಾರಿ ಯಡ್ರಾಮಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ-9620651971).

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News