15ನೇ ಹಣಕಾಸಿನಲ್ಲಿ ಅವ್ಯವಹಾರ ಆರೋಪ: ಯಳವಾರ ಗ್ರಾ.ಪಂಗೆ ಮುತ್ತಿಗೆ
ಕಲಬುರಗಿ: ಜೇವರ್ಗಿ ತಾಲ್ಲೂಕಿನ ಯಾಳವಾರ ಗ್ರಾಮ ಪಂಚಾಯತಿಯಲ್ಲಿ 2025ರ ಸಾಲಿನ 15ನೇ ಹಣಕಾಸು ಯೋಜನೆಯಡಿ ಭ್ರಷ್ಟಾಚಾರ ನಡೆದಿರುವುದು ಖಂಡಿಸಿ ಆದರ್ಶ ಗ್ರಾಮ ಸಮಿತಿ ನೇತೃತ್ವದಲ್ಲಿ ಯಾಳವಾರ, ಸಿಗರಥಳ್ಳಿ, ಕೊಡಚಿ, ಲಖಣಾಪೂರ, ಚಿಗರಳ್ಳಿ, ಗ್ರಾಮಗಳ ಜನರೊಂದಿಗೆ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.
ಜೇವರ್ಗಿ ತಹಸೀಲ್ದಾರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹೋರಾಟ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳ ಬಗ್ಗೆ ಚರ್ಚಿಸಿ, ಈಗಾಗಲೇ ತನಿಖಾ ತಂಡ ನೇಮಿಸಿದೆ ಅಕ್ಟೋಬರ್ 28 ರಿಂದ/ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
15ನೇ ಹಣಕಾಸಿನ ಯೋಜನೆಯ ಕ್ರಿಯಾಯೋಜನೆ ಸೇರಿದಂತೆ ಹಲವು ದಾಖಲೆ ಇರದೇ ಇದರಿಂದ ಪಂಚಾಯತ್ ಕಾರ್ಯದರ್ಶಿಗೆ ದಾಖಲೆ ಇಲ್ಲದ ಬಗ್ಗೆ ಲಿಖಿತವಾಗಿ ಕೊಡಲು ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದರು. ಈ ವೇಳೆ ಹೋರಾಟ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಆದರ್ಶ್ ಗ್ರಾಮ ಸಮಿತಿ ಅಧ್ಯಕ್ಷ ಇಬ್ರಾಹಿಂ ಪಟೇಲ್ ಯಾಳವಾರ, ರಾಜ ಪಟೇಲ್ ಪೊಲೀಸ್, ಡಾ. ಮಹೇಶ್ ಕುಮಾರ್ ರಾಥೋಡ್, ಬಾಬು ಬಿ ಪಾಟೀಲ್, ಶಾಂತಯ್ಯ ಗುತ್ತೇದಾರ್, ನಿಂಗಪ್ಪ ಪೂಜಾರಿ, ಶರಣಪ್ಪ ದೊಡ್ಮನಿ, ಅಖಿಲ್ ಪಾಶ ಜಾಗಿದ್ದಾರ್, ಸದ್ದಾಂ ಪಟೇಲ್, ಸೈಬಣ್ಣ ಕವಲ್ದಾರ್, ಗೌಡಪ್ಪ ರೆಡ್ಡಿ, ಮೆಹಬೂಬ್ ಪಟೇಲ್, ಬೈಲಪ್ಪ ದೊರೆ, ಹುಜೂರು ಪಟೇಲ್, ಗ್ರಾಮ ಪಂಚಾಯತ್ ಸದಸ್ಯ ಮಾಳಪ್ಪ ಪೂಜಾರಿ, ಸಿದ್ದಪ್ಪ ಗುರುಕಾರ, ಮುಹಮ್ಮದ್ ಚೌದ್ರಿ ಸೇರಿದಂತೆ ಅನೇಕರು ಇದ್ದರು.