ಕಲ್ಲಾಪು: ಸುಪರ್ ಚಿನ್ನಾಭರಣ ಮಳಿಗೆ ಉದ್ಘಾಟನೆ

Update: 2024-04-30 10:44 GMT

ಉಳ್ಳಾಲ: ತೊಕ್ಕೊಟ್ಟಿನ ಹೃದಯ ಭಾಗದಲ್ಲಿ ಹಲವು ವರ್ಷಗಳ ಹಿಂದೆ ಆರಂಭಗೊಂಡ ಸುಪರ್ ಬಝಾರ್ ಸಂಸ್ಥೆ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉದ್ಯಮ ಆರಂಭಿಸಿದ ಹಿನ್ನೆಲೆಯಲ್ಲಿ ಈಗ ಬಹಳಷ್ಟು ಎತ್ತರಕ್ಕೆ ಬೆಳೆದು ಬಂದಿದೆ. ಇದೀಗ ಜಿಲ್ಲೆಯ ವಿವಿಧ ಕಡೆಗಳಲ್ಲಿ 45 ಸಂಸ್ಥೆ ಆರಂಭಗೊಳ್ಳಲು ಮಾಲೀಕರ ಜತೆ ಗ್ರಾಹಕರ ಸಹಕಾರ ಕಾರಣ ಆಗಿದೆ. ಕೆಲವು ಪಾಲುದಾರರು ಸೇರಿ ಆರಂಭಿಸಿರುವ ಸುಪರ್ ಗೋಲ್ಡ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು . ಗ್ರಾಮೀಣ ಬಡ ಕುಟುಂಬಗಳಿಗೆ ಸಹಕಾರಿಯಾಗಬೇಕು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

ಅವರು ಕಲ್ಲಾಪು ವಿನಲ್ಲಿ ಆರಂಭ ಗೊಂಡ ನೂತನ ಸುಪರ್ ಗೋಲ್ಡ್ ಸಂ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಸಂಸ್ಥೆಯನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಅಭಿವೃದ್ಧಿ ಗೆ ಒತ್ತು ನೀಡಬೇಕು. ನಮ್ಮ ಸಮಾಜದ ಬಹಳಷ್ಟು ಯುವಕರು ಕಲಿಯಲಿಕ್ಕಿದೆ ಎಂಬ ಸಂದೇಶವನ್ನು ಕೂಡಾ ಈ ಸಂಸ್ಥೆ ಕೊಡುತ್ತಿದೆ. ಬಹಳಷ್ಟು ಕಡೆ ಸಣ್ಣ ಅಂಗಡಿಯಲ್ಲಿ ಉದ್ಯಮ ಆರಂಭಿಸಿ ಅನುಭವ ಹಾಗೂ ಲಾಭಾಂಶದ ಆಧಾರದಲ್ಲಿ ಅಂತರಾಷ್ಟ್ರೀಯ ಮಟ್ಟದವರೆಗೆ ಬೆಳೆದ ಸಂಸ್ಥೆಗಳು ಇವೆ. ತೊಕ್ಕೋಟು ಭಾಗದ ಜನರು ಮಧ್ಯಮ ವರ್ಗದವರು ಆದ ಕಾರಣ ಮಾಲೀಕರು ದರ ಕಡಿತ ಮಾಡಿ ನೀಡಿದರೆ ಉತ್ತಮ. ಜನರು ಚಿನ್ನಾಭರಣ ಖರೀದಿಗೆ ಮಂಗಳೂರು ಹೋಗುವ ಬದಲು ಸುಪರ್ ಗೋಲ್ಡ್ ನಿಂದ ಖರೀದಿ ಮಾಡಿದರೆ ಈ ಸಂಸ್ಥೆಯ ಜತೆಗೆ ಊರು ಅಭಿವೃದ್ಧಿ ಕಾಣಬಹುದು. ಪರೋಕ್ಷವಾಗಿ ಸಮಾಜದ ಅಭಿವೃದ್ಧಿಗೂ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹೈದರ್ ಪರ್ತಿಪ್ಪಾಡಿ ಮಾತನಾಡಿ, ಸುಪರ್ ಗೋಲ್ಡ್ ಐದು ವರ್ಷ ಗಳ ಹಿಂದೆ ತೊಕ್ಕೊಟ್ಟಿನಲ್ಲಿ ಆರಂಭ ಗೊಂಡಿತ್ತು. ಗ್ರಾಹಕರು ಈ ಮಳಿಗೆಯನ್ನು ವಿಶ್ವಾಸ ಕ್ಕೆ ಪಡೆದ ಹಿನ್ನಲೆಯಲ್ಲಿ ಇದೀಗ ಎರಡನೇ ಮಳಿಗೆ ಆರಂಭಗೊಂಡಿದೆ. ಈ ಮಳಿಗೆ ಬಡ ಜನರ ಖರೀದಿಗೆ ಅನುಕೂಲ ಆಗಿರುವುದರಿಂದ ಬಹಳಷ್ಟು ಮಂದಿ ಇದೇ ಮಳಿಗೆಗೆ ಬರುತ್ತಾರೆ . ಮಾಲೀಕರು ಕೂಡ ಲಾಭಾಂಶ ಹಾಗೂ ತಯಾರಿ ವೆಚ್ಚ ಕಡಿಮೆ ಮಾಡಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನೀಡಬೇಕು.ಮಂಗಳೂರಿಗೆ ಚಿನ್ನ ಖರೀದಿಗೆ ಹೋಗುವ ಬದಲು ಹತ್ತಿರದಲ್ಲೇ ಇರುವ ಸುಪರ್ ಗೋಲ್ಡ್ ನಿಂದ ಖರೀದಿ ಮಾಡಿದರೆ ಗ್ರಾಹಕರಿಗೆ ಲಾಭಾಂಶ ಕೂಡ ಸಿಗುತ್ತದೆ.ಈ ಸಂಸ್ಥೆಯನ್ನು ಬೆಳೆಸುವ ಜವಾಬ್ದಾರಿ ಗ್ರಾಹಕರ ಮೇಲಿದೆ ಎಂದು ಹೇಳಿದರು.

ಸುಪರ್‌ ಗೋಲ್ಡ್ ಚೆಯರ್ಮ್ಯಾನ್ ಟಿ.ಎಂ ಬಾವಾಕ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್, ಇಬ್ರಾಹಿಂ ಕೋಡಿಜಾಲ್,  ಶರೀಫ್ ವೈಟ್ ಸ್ಟೋನ್, ಸಾಗರ್ ಇಸ್ಮಾಯಿಲ್, ದಿನೇಶ್ ರೈ, ನಾಸೀರ್ ಅಹ್ಮದ್ ಸಾಮಣಿಗೆ, ಸಲೀಂ ಯು.ಬಿ, ಸುಪರ್ ಗೋಲ್ಡ್ ನ ಪಾಲುದಾರರಾದ ಯು.ಎನ್.ತಯ್ಯುಬ್ ಹಾಜಿ , ಫೈಝಲ್, ಯು.ಎಂ.ಹಸನಬ್ಬ ಹಾಜಿ, ಯು.ಎ.ಮುಹಮ್ಮದ್ ಯು.ಎಂ.ಸೀದಿಯಬ್ಬ, ಅಬ್ದುಲ್ ರಹಿಮಾನ್ ಹಾಜಿ, ಮಾರ್ಕೆಟಿಂಗ್ ಮೆನೇಜಿಂಗ್ ಪಾರ್ಟ್ನರ್ ಮುಹಮ್ಮದ್ ಖಲಂದರ್, ಮುಹಮ್ಮದ್ ನದೀಂ , ಮತ್ತಿತರರು ಉಪಸ್ಥಿತರಿದ್ದರು.

ಶಿಶಾಂತ್ ಕಾರ್ಯಕ್ರಮ ನಿರೂಪಿಸಿದರು ಸಂಸ್ಥೆ ಯ ಮಾರ್ಕೆಟಿಂಗ್ ಮ್ಯಾನೇಜರ್ ಆಸೀಫ್ ವಂದಿಸಿದರು.

ಈ ಮಳಿಗೆ ಬಡವರಿಗೆ ಅನುಕೂಲ ಆಗಬೇಕು ಎಂಬ ಗುರಿ ನಮ್ಮದು. 2016 ರಲ್ಲಿ ತೊಕ್ಕೊಟ್ಟಿನಲ್ಲಿ ಚಿನ್ನದ ಮಳಿಗೆ ಆರಂಭಿಸಿ ತಯಾರಿ ವೆಚ್ಚ ಕಡಿಮೆ ಮಾಡಿ ಗ್ರಾಹಕರಿಗೆ ನೀಡುವ ಮೂಲಕ ಯಶಸ್ಸು ಕಂಡಿದ್ದೇವೆ. ಇದೀಗ ಕಲ್ಲಾಪು ಬಳಿ ನಿರ್ಮಾಣಗೊಂಡ ಸ್ವಂತ ಕಟ್ಟಡದಲ್ಲಿ ಚಿನ್ನದ ಎರಡನೇ ಮಳಿಗೆ ಆರಂಭಿಸಿದ್ದೇವೆ. ಈ ಬಾರಿ ಕೆಲವು ಸ್ಕೀಂ ಕೂಡ ಇಡಲಾಗಿದೆ. ಮದುವೆ ಸಮಾರಂಭಕ್ಕಾಗಿ ಚಿನ್ನ ಖರೀದಿ ಮಾಡುವವರಿಗೆ ವಿಶೇಷವಾದ ರಿಯಾಯಿತಿ ಕೂಡ ಇದೆ. ಯಾವುದಕ್ಕೂ ದುಬಾರಿ ದರ ನಮ್ಮಲ್ಲಿ ಇಲ್ಲ. ಒಟ್ಟಿನಲ್ಲಿ ಗ್ರಾಹಕರು ನಮಗೆ ಬೇಕು. ಖರೀದಿಯಲ್ಲಿ ಅವರಿಗೆ ಖುಷಿ ಆಗಬೇಕು. ಗ್ರಾಹಕರ ಮೇಲೆ ವಿಶ್ವಾಸ ನಮಗಿದೆ. ಮುಂದಿನ ಹಂತದಲ್ಲಿ ಬೈಕ್ ಹಾಗೂ ಇನ್ನಿತರ ಡ್ರಾ ಕಾರ್ಯಕ್ರಮ ಇಡಲಾಗುವುದು. ಚಿನ್ನಾಭರಣ ಖರೀದಿ ಮಾಡಿದವರಿಗೆ ವಿಶೇಷ ಉಡುಗೊರೆ ಕೂಡಾ ನೀಡಲಾಗುತ್ತದೆ.

- ಟಿ.ಎಂ ಬಾವಾ, ಚೆಯರ್ಮ್ಯಾನ್, ಸುಪರ್ ಗೋಲ್ಡ್

 



 


 

 

 














 


 


 


 


 


 


 


 

 

 

 

 

 

 

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News