×
Ad

ಕೇರಳ ಎಸೆಸೆಲ್ಸಿ ಫಲಿತಾಂಶ ಪ್ರಕಟ: ಕಾಸರಗೋಡು ಜಿಲ್ಲೆಗೆ ಶೇ. 99.47 ಫಲಿತಾಂಶ

Update: 2026-05-15 20:15 IST

ಕಾಸರಗೋಡು: 2025-26 ನೇ ಸಾಲಿನ ಕೇರಳ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ 99.47 ಶೇಕಡಾ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 10,547 ಬಾಲಕರು, 9,871 ಬಾಲಕಿಯರು ಉತ್ತೀರ್ಣ ರಾಗಿದ್ದಾರೆ.1,193 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ.

ಒಟ್ಟು 20,527 ವಿದ್ಯಾರ್ಥಿಗಳ ಪೈಕಿ 20,418 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ಜಿಲ್ಲೆಯಲ್ಲಿ. 123 ಶಾಲೆಗಳು ಶೇಕಡಾ 100 ಫಲಿತಾಂಶ ಪಡೆದಿದೆ. ಈ ಪೈಕಿ 73 ಸರಕಾರಿ ಹಾಗೂ 24 ಅನುದಾನಿತ, 26 ಅನುದಾನೇತರ ಶಾಲೆಗಳು ಒಳಗೊಂಡಿವೆ. ಎ ಪ್ಲಸ್ ಪಡೆದವರಲ್ಲಿ 385 ಬಾಲಕರು, 808 ಬಾಲಕಿಯರು ಒಳಗೊಂಡಿದ್ದಾರೆ. ಪರಿಶಿಷ್ಟ ಜಾತಿ ಯ 759 ವಿದ್ಯಾರ್ಥಿಗಳಲ್ಲಿ 754 ಹಾಗೂ ಪರಿಶಿಷ್ಠ ವರ್ಗದ 1,095 ವಿದ್ಯಾರ್ಥಿ ಗಳಲ್ಲಿ 1.089 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ನಾಯಮ್ಮರ ಮೂಲೆ ಟಿ. ಐ ಎಚ್ ಎಸ್ ಶಾಲೆಯಲ್ಲಿ ಅತ್ಯಧಿಕ 785 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,, 781 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ.99.49 ಶೇಕಡಾ ಫಲಿತಾಂಶ ಬಂದಿದೆ. ಸರಕಾರಿ ಶಾಲೆಗಳ ಪೈಕಿ ಚಾಯೋ ತ್ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಅತ್ಯಧಿಕ 359 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇಕಡಾ 100 ಫಲಿತಾಂಶ ಲಭಿಸಿದೆ. ಅತೀ ಕಡಿಮೆ ವಿದ್ಯಾರ್ಥಿಗಳು ಪರೀಕ್ಷೆ ಬರೆದದ್ದು, ಎಡನೀರು ಎಚ್. ಎಚ್. ಎಸ್.ಎಸ್ ಐ . ಬಿ ಶಾಲೆ ಯಲ್ಲಿ 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News