ಕನಕಗಿರಿ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ನ.7ರಂದು ನಡೆಯಲಿರುವ ದ್ವಿತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಬೈಕ್ ಜಾಗೃತಿ ಜಾಥಾ ನಡೆಯಿತು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹುಸೇನ್ ದಾಸ್ ಜಾಥಾಕ್ಕೆ ಚಾಲನೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಮೆಹಬೂಬ ಹುಸೇನ ಮಾತನಾಡಿ, ನ. 7ರಂದು ದ್ವಿತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ಕನ್ನಡಾಭಿಮಾನಿಗಳ ಸಹಕಾರ ಅಗತ್ಯವಾಗಿದೆ. ಸಮ್ಮೇಳನದ ಪ್ರಚಾರದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಬೈಕ್ ಜಾಥಾ ನಡೆಸಿ ಕನ್ನಡ ಪರ ಹಾಗೂ ಸಾಹಿತ್ಯ ಸಮ್ಮೇಳನದ ಪರ ಘೋಷಣೆಗಳನ್ನು ಕೂಗಲಾಯಿತು ಎಂದು ತಿಳಿಸಿದರು.

ಕಸಾಪ ಕಚೇರಿಯಿಂದ ಆರಂಭವಾದ ಜಾಥಾವು ಪಟ್ಟಣದ ಎಪಿಎಂಸಿ, ವಾಲ್ಮೀಕಿ ವೃತ್ತ, ನವಲಿ ರಸ್ತೆ, ಇಂದಿರಾನಗರ, ಬಸವೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಸೊಸೈಟಿ ಹಾಗೂ ಕಲ್ಮಠ ರಸ್ತೆಯ ಮೂಲಕ ಸಾಗಿತು.

ಕನ್ನಡ ಬಾವುಟಗಳನ್ನು ಹಿಡಿದು, ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ಸಾಗಿದ ಸಾಹಿತ್ಯಾಸಕ್ತರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಹಾಗೂ ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.

ಜಾಥಾದಲ್ಲಿ ಲಿಂಗಪ್ಪ ಪೂಜಾರ್, ರವಿ ಪಾತ್ರದ್, ತಿಪ್ಪಣ್ಣ ಮಡಿವಾಳ, ಮಹಮ್ಮದ್ ಷರಿಫ್, ಶಿವಕುಮಾರ್ ಸಜ್ಜನ್, ಚಂದ್ರು ಚೋಳಿನ್, ದೇಶಿಕ್ ಆಚಾರ್, ಗಂಗಾಧರ ಗಂಗಾಮತ, ಅಜ್ಮೀರ್ ಎಲಿಗಾರ್, ಮಹಾಂತೇಶ ಕೊಡ್ಲಿ, ವಿನೋದ ಮರಾಠಿ, ಕಂಠಿ ಮಡಿವಾಳ, ವಿಶ್ವನಾಥ ಕೋರಿಶೆಟ್ಟರ್, ಪರಸಪ್ಪ ಹೊರಪೇಟೆ, ಕನಕಪ್ಪ ದಂಡೀನ್ ಹಾಗೂ ಪ್ರವೀಣ್ ಕೋರಿಶೆಟ್ರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor