×
Ad

ಯಲಬುರ್ಗಾ| ಕಸದ ರಾಶಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

Update: 2025-12-15 22:35 IST

ಯಲಬುರ್ಗಾ: ಪಟ್ಟಣದ ಪೋಸ್ಟ್ ಆಫೀಸ್ ಹಿಂಭಾಗದಲ್ಲಿ ಕೆಇಬಿ–ಕೆಪಿಟಿಸಿಎಲ್ 110 ಕೆವಿ ಸ್ಟೇಷನ್ ಬಳಿ ಕಸದ ರಾಶಿಗೆ ಬೆಂಕಿ ತಗುಲಿ ಭಾರೀ ಅನಾಹುತವೊಂದು ತಪ್ಪಿದೆ. 

ಕಸದ ರಾಶಿಗೆ ಸಣ್ಣ ಕಿಡಿ ಬಿದ್ದು ಕ್ಷಣಾರ್ಧದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಆವರಿಸಿಕೊಂಡಿತ್ತು. ಬೆಂಕಿಯ ತೀವ್ರತೆಯಿಂದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಾರೆ. 

ಅವಘಡದ ವೇಳೆ ಕೆಇಬಿ ಸೆಕ್ಷನ್ ಆಫೀಸರ್ ರವಿ, ಲೈನ್‌ಮನ್ ಶಬ್ಬೀರ್ ಒಂಟಿ ಹಾಗೂ ಹನುಮಂತಪ್ಪ ಸೇರಿದಂತೆ ಸ್ಥಳೀಯರು ಸ್ಥಳದಲ್ಲಿದ್ದರು. ಘಟನೆ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News