×
Ad

ಕನಕಗಿರಿ | ಅನ್ಯ ಭಾಷಿಕರಿಗೆ ಕನ್ನಡದ ಅರಿವು ಮೂಡಿಸಿ: ವೀರಣ್ಣ ನಕ್ರಳ್ಳಿ

Update: 2025-11-05 18:41 IST

ಕನಕಗಿರಿ : ತಾಲೂಕಿನ ನವಲಿ ಗ್ರಾಮ ಪಂಚಾಯತಿಯಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವದ ಜಯಂತಿ ಆಚರಣೆ ನಡೆಯಿತು. ಈ ವೇಳೆ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ನಂತರ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ವೀರಣ್ಣ ನಕ್ರಳ್ಳಿ ಮಾತನಾಡಿ, ಕನ್ನಡ ಭಾಷೆ ನಮ್ಮೆಲ್ಲರ ಮಾತೃ ಭಾಷೆ. ಕರ್ನಾಟಕದಲ್ಲಿರುವ ಎಲ್ಲರಿಗೂ ಕನ್ನಡ ಬರಲೇಬೇಕು. ಅನ್ಯ ರಾಜ್ಯದ ಜನರಿಗೆ, ಅನ್ಯ ಭಾಷಿಕರಿಗೆ ನಾವು ಕನ್ನಡದ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮುದೇಗೌಡ, ಸಿದ್ದಪ್ಪ, ಹನುಮಂತಪ್ಪ ತಳವಾರ್, ಜಾವೀದ್ ಇತರರು ಇದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News