ಕೊಪ್ಪಳ: ಎಸ್ ಐ ಆರ್ ಹೆಸರಿನಲ್ಲಿ ಅಮಾಯಕ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಲು ಸಂಚು ರೂಪಿಸಿದೆ ಎಂದು ಆರೋಪಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕರ್ನಾಟಕದ ಜನತೆ ಸಿದ್ಧಪಡಿಸಿರುವ ಎಫ್ ಐ ಆರ್. ದಾಖಲಿಸಿ, ಸೆಪ್ಟಂಬರ್ 1ರಂದು ಬೆಂಗಳೂರಿನಲ್ಲಿ ಎಲೆಕ್ಷನ್ ಕಮಿಷನರ್ ಕಚೇರಿಗೆ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ನಾಗರಿಕರ ಸಂಘಟನೆಗಳ ಪರವಾಗಿ ಹೋರಾಟಗಾರ ಪ್ರೊ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಸುಮಾರು 60 ಲಕ್ಷ ಅರ್ಹ ಮತದಾರರ ಮತದಾನದ ಹಕ್ಕು ರದ್ದುಗೊಳಿಸಿರುವ ಮತ್ತು 40 ಲಕ್ಷ ಮತದಾರರಿಗೆ ನಾಗರಿಕತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಿದ ಕ್ರಮವನ್ನು ಖಂಡಿಸಿ ಹಾಗೂ 15 ಲಕ್ಷ ಮತದಾರರ ನೋಂದಣಿಯನ್ನು ಸಮಸ್ಯಾತ್ಮಕ ಗೊಳಿಸಿರುವ ಆಯೋಗದ ಕ್ರಮ ಸಮಂಜಸವಲ್ಲ. ಇದು ಅವೈಜ್ಞಾನಿಕ ಆಸಂವಿಧಾನಿಕ ಹಾಗೂ ದುರುದ್ದೇಶಗಳಿಂದ ಕೂಡಿದ ಪ್ರಕ್ರಿಯೆ ಇದಾಗಿದೆ. ದೇಶದ ಜನತೆಯ ಮೇಲೆ ಹೇರಿದ ಈ ಕ್ರಮ ವನ್ನು ಖಂಡಿಸಿ ಬೃಹತ್

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನಾಗರಿಕ ಸಂಘಟನೆಗಳ ಸದಸ್ಯರಾದ ಮುಹಮ್ಮದ್ ಅಶ್ಫಾಕ್, ಎಂ.ಡಿ. ಸಿರಾಜ್, ಚನ್ನಮ್ಮ ,ದುರ್ಗೇಶ್ , ಸುಭಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor